ಐಬಿ, ‘ರಾ’ ಮುಖ್ಯಸ್ಥರ ಸೇವಾವಧಿ 6 ತಿಂಗಳು ವಿಸ್ತರಣೆ

7

ಐಬಿ, ‘ರಾ’ ಮುಖ್ಯಸ್ಥರ ಸೇವಾವಧಿ 6 ತಿಂಗಳು ವಿಸ್ತರಣೆ

Published:
Updated:

ನವದೆಹಲಿ: ಬೇಹುಗಾರಿಕಾ ಸಂಸ್ಥೆ ಮತ್ತು ರಿಸರ್ಚ್‌ ಅನಾಲಿಸಿಸ್‌ ವಿಂಗ್‌ನ (ರಾ) ಸಂಸ್ಥೆಯ ಮುಖ್ಯಸ್ಥರಾದ ರಾಜೀವ್‌ ಜೈನ್‌ ಮತ್ತು ಅನಿಕ್‌ ಕೆ ಧಸ್ಮಾನಾ ಅವರ ಸೇವಾವಧಿಯನ್ನು ಆರು ತಿಂಗಳ ಕಾಲ ವಿಸ್ತರಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

ಜೈನ್‌ ಅವರ ಸೇವಾವಧಿ ಇದೇ 30ಕ್ಕೆ ಕೊನೆಗೊಳ್ಳಲಿದ್ದು, ಧಸ್ಮಾನಾ ಅವರು ಇದೇ 29ರಂದು ನಿವೃತ್ತಿಯಾಗಲಿದ್ದರು. 

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಇಬ್ಬರ ಸೇವಾವಧಿಯನ್ನು ಮುಂದುವರಿಸಲಾಗಿದೆ ಎನ್ನಲಾಗಿದೆ. ನೂತನ ಮುಖ್ಯಸ್ಥರ ಆಯ್ಕೆಯನ್ನು ಹೊಸ ಸರ್ಕಾರಕ್ಕೆ ಬಿಟ್ಟುಕೊಡುವ ಸಂಬಂಧ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

 

 

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !