ಬಿಜೆಪಿ ಗೋಹತ್ಯೆ ಮಾಡಿದೆ: ಕೇಂದ್ರ ಸಚಿವ ವಿಜಯ್ ಸಾಂಪಲಾ

ಶನಿವಾರ, ಮೇ 25, 2019
28 °C

ಬಿಜೆಪಿ ಗೋಹತ್ಯೆ ಮಾಡಿದೆ: ಕೇಂದ್ರ ಸಚಿವ ವಿಜಯ್ ಸಾಂಪಲಾ

Published:
Updated:

ಚಂಢೀಗಡ: ಪಂಜಾಬ್‌ನ ಹೋಷಿಯಾರ್‌ಪುರ್ ಲೋಕಸಭಾ ಕ್ಷೇತ್ರದಲ್ಲಿ ಟಿಕೆಟ್ ನಿರಾಕರಿಸಿದ್ದಕ್ಕೆ ಸಿಟ್ಟುಗೊಂಡಿರುವ ಕೇಂದ್ರ ಸಚಿವ ವಿಜಯ್ ಸಾಂಪಲಾ, ಬಿಜೆಪಿ ಗೋ ಹತ್ಯೆ  ಮಾಡಿದೆ ಎಂದು ಟ್ವೀಟ್ ಮಾಡಿದ್ದಾರೆ.

ಬಿಜೆಪಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಹೋಷಿಯಾರ್‌ಪುರ್ ಕ್ಷೇತ್ರದಲ್ಲಿ ಫಗ್ವಾರಾ ಶಾಸಕ ಸೋಮ್ ಪ್ರಕಾಶ್‌ಗೆ ಟಿಕೆಟ್ ನೀಡಲಾಗಿದೆ.

ಏತನ್ಮಧ್ಯೆ, ಟಿಕೆಟ್ ನಿರಾಕರಿಸಿದ್ದಕ್ಕೆ ಸಿಟ್ಟುಗೊಂಡ ಹಾಲಿ ಸಂಸರಾಗಿರುವ ಸಾಂಪಲಾ,  ತುಂಬಾ ದುಃಖವಾಗಿದೆ, ಬಿಜೆಪಿ ಗೋಹತ್ಯೆ ಮಾಡಿದೆ ಎಂದು ಟ್ವೀಟಿಸಿದ್ದಾರೆ. ಇದಾದ ನಂತರ ಇನ್ನೊಂದು ಟ್ವೀಟ್‌ನಲ್ಲಿ ಸಾಂಪಲಾ ಹೀಗೆ ಬರೆದಿದ್ದಾರೆ.

ನಾನೇನಾದರೂ ತಪ್ಪು ಮಾಡಿದ್ದರೆ ಹೇಳಬಹುದಿತ್ತು, ನಾನು ಮಾಡಿದ ತಪ್ಪು ಎಂದರೆ ನನ್ನ ಮೇಲೆ ಭ್ರಷ್ಟಾಚಾರದ ಆರೋಪಗಳಿಲ್ಲ, ನನ್ನ ನಡವಳಿಕೆಯ ಬಗ್ಗೆ ಯಾರೂ ಬೆರಳು ತೋರಿಸುವಂತೆ ಮಾಡಿಲ್ಲ. ಕ್ಷೇತ್ರದಲ್ಲಿ ವಿಮಾನ ನಿಲ್ದಾಣ ನಿರ್ಮಿಸಿದೆ. ರೈಲು ಸಂಚಾರ ಮಾಡಿಸಿದೆ. ರಸ್ತೆ ನಿರ್ಮಿಸಿದೆ. ಇದೇ ನನ್ನ ತಪ್ಪು ಎಂದಾದರೆ ಇಂಥಾ  ತಪ್ಪುಗಳನ್ನು ಮಾಡಬೇಡಿ ಎಂದು ನಾನು ಮುಂದಿನ ಜನಾಂಗಕ್ಕೆ ತಿಳಿಸುತ್ತೇನೆ.

ಇದೀಗ ಅವರು ತಮ್ಮ ಹೆಸರಿನೊಂದಿಗೆ ಇದ್ದ 'ಚೌಕೀದಾರ್' ಉಪಸರ್ಗವನ್ನು ತೆಗೆದು ಹಾಕಿದ್ದಾರೆ. ಸಾಮಾಜಿಕ ನ್ಯಾಯ ಮತ್ತು ಅಭಿವೃದ್ಧಿಯ ರಾಜ್ಯಖಾತೆ ಸಚಿವರಾಗಿದ್ದಾರೆ ಸಾಂಪಲಾ.

ಬರಹ ಇಷ್ಟವಾಯಿತೆ?

 • 21

  Happy
 • 1

  Amused
 • 0

  Sad
 • 0

  Frustrated
 • 5

  Angry

Comments:

0 comments

Write the first review for this !