ಲಂಚದ ಸುಳಿಯಲ್ಲಿ ‘ಬೆಸ್ಟ್‌ ತಹಸೀಲ್ದಾರ್‘ ಲಾವಣ್ಯ

ಶುಕ್ರವಾರ, ಜೂಲೈ 19, 2019
26 °C

ಲಂಚದ ಸುಳಿಯಲ್ಲಿ ‘ಬೆಸ್ಟ್‌ ತಹಸೀಲ್ದಾರ್‘ ಲಾವಣ್ಯ

Published:
Updated:

ಹೈದರಾಬಾದ್‌: ಎರಡು ವರ್ಷಗಳ ಹಿಂದೆ ‘ಉತ್ತಮ ತಹಸೀಲ್ದಾರ್‘ ಪ್ರಶಸ್ತಿ ಪಡೆದಿದ್ದ ಕಂದಾಯ ಇಲಾಖೆ ಅಧಿಕಾರಿ ವಿ.ಲಾವಣ್ಯ ಅವರನ್ನು ಭ್ರಷ್ಟಾಚಾರ ಆರೋಪದಡಿಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಲಾವಣ್ಯ ಅವರ ನಿವಾಸದ ಮೇಲೆ ದಾಳಿ ನಡೆಸಿ ₹ 93.5 ಲಕ್ಷ ನಗದು ಮತ್ತು 400 ಗ್ರಾಂ ಚಿನ್ನವನ್ನು ವಶ ಪಡಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಲಾವಣ್ಯ ರಂಗಾರೆಡ್ಡಿ ಜಿಲ್ಲೆಯಲ್ಲಿ ಕಂದಾಯ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು. ಲಾವಣ್ಯ ಮತ್ತು ಅವರ ಕಿರಿಯ ಅಧಿಕಾರಿ ರೈತ ಬಾಸ್ಕರ್ ಜಮೀನಿನ ದಾಖಲೆ ಪತ್ರಗಳನ್ನು ತಿದ್ದುಪಡಿ ಮಾಡಿಕೊಡಲು ₹ 8 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಇದಕ್ಕಾಗಿ ಬಾಸ್ಕರ್‌ ₹ 30000 ಹಣವನ್ನು ಪಾವತಿಸಿದ್ದರು. ಉಳಿದ ಹಣವನ್ನು ನೀಡುವಂತೆ ಒತ್ತಾಯಿಸಿದ್ದರು. ಈ ವೇಳೆ ಬಾಸ್ಕರ್ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳಿಗೆ ಸಾಕ್ಷಿ ಸಮೇತ ದೂರ ನೀಡಿದ್ದರು.

ಈ ಹಿನ್ನೆಲೆಯಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಲಾವಣ್ಯ ಅವರ ಮನೆಯ ಮೇಲೆ ಗುರುವಾರ ದಾಳಿ ನಡೆಸಿ ಬಂಧಿಸಿದ್ದಾರೆ. ಎರಡು ವರ್ಷಗಳ ಹಿಂದೆ ಲಾವಣ್ಯ ಸರ್ಕಾರದಿಂದ ‘ಉತ್ತಮ ತಹಸೀಲ್ದಾರ್‘ ಎಂಬ ಬಿರುದು ಪಡೆದಿದ್ದರು. ಕಂದಾಯ ಇಲಾಖೆಯಲ್ಲಿ ನಡೆಯುತ್ತಿರುವ ಲಂಚಗುಳಿತನಕ್ಕೆ ತೆಲಂಗಾಣದ ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 43

  Happy
 • 5

  Amused
 • 2

  Sad
 • 2

  Frustrated
 • 7

  Angry

Comments:

0 comments

Write the first review for this !