ಪಾಕಿಸ್ತಾನ ಕಾಶ್ಮೀರ ಬೇಡಿಕೆ ಕೈಬಿಡಬೇಕು: ಅಫ್ರಿದಿ ಹೇಳಿಕೆ ಸರಿ–ರಾಜನಾಥ್‌ ಸಿಂಗ್‌

7

ಪಾಕಿಸ್ತಾನ ಕಾಶ್ಮೀರ ಬೇಡಿಕೆ ಕೈಬಿಡಬೇಕು: ಅಫ್ರಿದಿ ಹೇಳಿಕೆ ಸರಿ–ರಾಜನಾಥ್‌ ಸಿಂಗ್‌

Published:
Updated:

ಲಂಡನ್‌: ಪಾಕಿಸ್ತಾನ ತನ್ನ ನಾಲ್ಕು ಪ್ರಾಂತ್ಯಗಳನ್ನು ಸಮರ್ಥವಾಗಿ ನಿರ್ವಹಿಸುತ್ತಿಲ್ಲ. ಹೀಗಿರುವಾಗ ಕಾಶ್ಮೀರವನ್ನು ನಿಯಂತ್ರಿಸಲು ಸಾಧ್ಯವೇ? ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್‌ ಅಫ್ರಿದಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಗೃಹಸಚಿವ ರಾಜನಾಥ್ ಸಿಂಗ್ ಆಫ್ರಿದಿ ಹೇಳಿಕೆ ಸರಿಯಾಗಿದೆ ಎಂದು ಹೇಳಿದ್ದಾರೆ. 

ಅಫ್ರಿದಿ ಹೇಳಿಕೆ ಸರಿಯಾಗಿದೆ,  ಪಾಕಿಸ್ತಾನವು ತನ್ನ ನಾಲ್ಕು ಪ್ರಾಂತ್ಯಗಳಾದ ಪಂಜಾಬ್‌, ಸಿಂಧ್‌, ಬಲೂಚಿಸ್ತಾನ, ಖೈಬರ್‌ ಪಕ್ತುಂಕ್ವಾ ಪ್ರದೇಶಗಳನ್ನೇ ಸಮರ್ಥವಾಗಿ ನಿರ್ವಹಿಸುತ್ತಿಲ್ಲ. ಹೀಗಿರುವಾಗ ಕಾಶ್ಮೀರವನ್ನು ನಿಯಂತ್ರಿಸಲು ಸಾಧ್ಯವೇ? ಕಾಶ್ಮೀರ ಯಾವಾಗಲೂ ಭಾರತದ ಅವಿಬಾಜ್ಯ ಅಂಗ ಎಂದು ರಾಜನಾಥ್‌ ಸಿಂಗ್‌ ತಿಳಿಸಿದ್ದಾರೆ. 

ಎಎನ್‌ಐ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಅವರು ಅಫ್ರಿಧಿ ಹೇಳಿಕೆ ಸರಿಯಾಗಿದೆ ಎಂದಿದ್ದಾರೆ. 

ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್‌ ಅಫ್ರಿದಿ ಲಂಡನ್‌ನಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಪಾಕಿಸ್ತಾನ ಕಾಶ್ಮೀರ ಬೇಡಿಕೆಯನ್ನು ಕೈಬಿಡಬೇಕು ಎಂದಿದ್ದರು.  ಇದರಿಂದ ಪಾಕ್‌ ಸರ್ಕಾರ ಹಾಗೂ ಪ್ರಧಾನಿ ಇಮ್ರಾನ್‌ ಖಾನ್‌ ಅವರಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಮುಜುಗರ ಉಂಟಾಗಿತ್ತು

ಇದನ್ನೂ ಓದಿ: 4 ಪ್ರಾಂತ್ಯ ನಿರ್ವಹಿಸಲಾರದ ಪಾಕ್; ಕಾಶ್ಮೀರವನ್ನು ನಿಯಂತ್ರಿಸುವುದೇ?: ಅಫ್ರಿದಿ

ಬರಹ ಇಷ್ಟವಾಯಿತೆ?

 • 9

  Happy
 • 0

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !