ಮಂಗಳವಾರ, ಸೆಪ್ಟೆಂಬರ್ 17, 2019
21 °C

ರಾಹುಲ್‌ ಗಾಂಧಿ ಎಡಪಕ್ಷಗಳ ಎದುರು ಸ್ಪರ್ಧಿಸಿರುವುದು ದುರದೃಷ್ಟಕರ: ಯೆಚೂರಿ

Published:
Updated:

ನವದೆಹಲಿ: ರಾಹುಲ್‌ ಗಾಂಧಿ ಕೇರಳದಲ್ಲಿ ಎಡಪಕ್ಷಗಳ ವಿರುದ್ಧ ಸ್ಪರ್ಧೆ ಮಾಡಿರುವುದು ದುರದೃಷ್ಟಕರ ಎಂದು ಸಿಪಿಐ(ಎಂ) ಪಕ್ಷದ ಪ್ರಧಾನಕಾರ್ಯದರ್ಶಿ ಸೀತಾರಾಂ ಯೆಚೂರಿ ತಿಳಿಸಿದ್ದಾರೆ. 

ಕೇರಳದ ವಯನಾಡ್ ಲೋಕಸಭಾ ಕ್ಷೇತ್ರದಲ್ಲಿ ರಾಹುಲ್‌ ಗಾಂಧಿ ಎಡಪಕ್ಷಗಳ ಎದುರು ಸ್ಪರ್ಧೆ ಮಾಡಿರುವುದು ಒಂದು ರೀತಿಯಲ್ಲಿ ನಿಮಗೆ ಮುಖಭಂಗವಾದಂತಲ್ಲವೇ? ಎಂಬ ಪ್ರಶ್ನೆಗೆ ಉತ್ತರಿಸಿರುವ ಯೆಚೂರಿ, ಇದು ದುರದೃಷ್ಟಕರ,  ನಿಮ್ಮ ಅಜ್ಜಿ ಮತ್ತು ತಾಯಿ ಕರ್ನಾಟಕದಿಂದ ಸ್ಪರ್ಧೆ ಮಾಡಿ ಗೆಲುವು ಕಂಡಿದ್ದಾರೆ. ನೀವು ಅಲ್ಲಿಂದ ಸ್ಪರ್ಧೆ ಮಾಡಿ ಎಂದು ರಾಹುಲ್ ಗಾಂಧಿಗೆ ಸಲಹೆ ಮಾಡಲಾಗಿತ್ತು ಎಂದು ಹಿಂದೂಸ್ತಾನ್‌ ಟೈಮ್ಸ್‌ಗೆ ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.

ಬಿಜೆಪಿಯನ್ನು ಸೋಲಿಸಬೇಕು ಎನ್ನುವ ನೀವು ಕೇರಳದಲ್ಲಿ ಎಡಪಕ್ಷಗಳನ್ನು ಸೋಲಿಸಲು ಮುಂದಾಗಿರುವುದರ ಹಿಂದಿನ ನಿಮ್ಮ ನಿಲುವು ಏನು ಎಂದು ಸೀತಾರಾಂ ಯೆಚೂರಿ ಪ್ರಶ್ನೆ ಮಾಡಿದ್ದಾರೆ.

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ದೇಶದಲ್ಲಿ ಬಿಜೆಪಿಯನ್ನು ಸೋಲಿಸಬೇಕು ಹಾಗೂ ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್‌ ಪಕ್ಷವನ್ನು ಸೋಲಿಸುವುದು ನಮ್ಮ ಮುಖ್ಯ ಗುರಿಯಾಗಿದ್ದು ಕೇಂದ್ರದಲ್ಲಿ ಜಾತ್ಯತೀತ ಸರ್ಕಾರ ರಚನೆಗೆ ಬೆಂಬಲ ನೀಡುವುದಾಗಿ ಯೆಚೂರಿ ತಿಳಿಸಿದ್ದಾರೆ.  

ಯುಪಿಎ–1ರಲ್ಲಿ ಅನುಷ್ಠಾನಗೊಂಡ ಕಲ್ಯಾಣ ಯೋಜನೆಗಳು ಎಡಪಕ್ಷಗಳ ಒತ್ತಡದಿಂದ ಆದ ಕೆಲಸಗಳು. ನರೇಗಾ, ಆಹಾರ ಭದ್ರತೆ ಮತ್ತು ನೂತನ ಭೂಸ್ವಾಧೀನ ಕಾಯ್ದೆಯಲ್ಲಿ ನಮ್ಮ ಪಾತ್ರ ಸಾಕಷ್ಟಿದೆ ಎಂದು ಯೆಚೂರಿ ಹೇಳಿದ್ದಾರೆ. 

Post Comments (+)