ಇಂದಿರಾ ಗಾಂಧಿ ಸೋಲಿನಂತೆ ಸ್ವಕ್ಷೇತ್ರದಲ್ಲಿ ಮೋದಿ ಸೋಲೂ ಇತಿಹಾಸವಾಗಲಿದೆ: ಮಾಯಾ

ಬುಧವಾರ, ಜೂನ್ 19, 2019
23 °C

ಇಂದಿರಾ ಗಾಂಧಿ ಸೋಲಿನಂತೆ ಸ್ವಕ್ಷೇತ್ರದಲ್ಲಿ ಮೋದಿ ಸೋಲೂ ಇತಿಹಾಸವಾಗಲಿದೆ: ಮಾಯಾ

Published:
Updated:

ನವದೆಹಲಿ: ಬಿಎಸ್‌ಪಿ ನಾಯಕಿ ಮಾಯಾವತಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಸ್ವಕ್ಷೇತ್ರದಲ್ಲಿ ಸೋಲು ಕಂಡ ಇತಿಹಾಸವನ್ನು ನೆನಪಿಸಿದ್ದಾರೆ.

ತುರ್ತುಪರಿಸ್ಥಿತಿ ಹೇರಿಕೆಯ ನಿರ್ಧಾರದಿಂದಾಗಿ ಇಂದಿರಾಗಾಂಧಿ ಅವರು 1977ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ತಮ್ಮ ಕ್ಷೇತ್ರವಾದ ರಾಯ್‌ಬರೇಲಿಯಲ್ಲಿ ಸೋಲುಕಂಡರು. ಈ ಇತಿಹಾಸ ವಾರಾಣಸಿಯಲ್ಲಿ ಮರುಕಳಿಸಿದರೆ ಅಚ್ಚರಿಯಿಲ್ಲ ಎಂದು ಹೇಳಿದ್ದಾರೆ.

ಈ ಕುರಿತು ಸರಣಿ ಟ್ವೀಟ್‌ಗಳನ್ನು ಮಾಡಿರುವ ಮಾಯಾವತಿ, ‘ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇಬ್ಬರೂ ಪ್ರತಿನಿಧಿಸುವ ಪುರ್ವಾಂಚಲ ಪ್ರದೇಶದಲ್ಲಿ ಅಭಿವೃದ್ಧಿ ಮರೆಯಾಗಿದೆ. ನೀಡಿದ್ದ ಭರವಸೆಗಳು ಹುಸಿಯಾಗಿವೆ. ಗೋರ್ಖ್‌ಪುರದಲ್ಲಿ ಯೋಗಿ ಅವರನ್ನು ತಿರಸ್ಕರಿಸಿದ್ದಾರೆ. ಹೀಗಾಗಿ ವಾರಾಣಸಿಯಲ್ಲಿ ಮೋದಿ ಅವರ ಸೋಲು ಅವರ ಗೆಲುವಿಗಿಂತಲೂ ಐತಿಹಾಸಿಕವಾಗಿರುತ್ತದೆ. 1977ರಲ್ಲಿ ರಾಯ್‌ಬರೇಲಿಯಲ್ಲಿ ನಿರ್ಮಾಣವಾದ ಸ್ಥಿತಿಯೇ ಇಲ್ಲಿ ಮರುಕಳಿಸಬಹುದು’ ಎಂದು ಬರೆದುಕೊಂಡಿದ್ದಾರೆ.

‘ಮೋದಿ ಅವರ ಗುಜರಾತ್ ಮಾದರಿ ಉತ್ತರ ಪ್ರದೇಶದ ಪುರ್ವಾಂಚಲ ಪ್ರದೇಶದ ಬಡತನ, ನಿರುದ್ಯೋಗವನ್ನು ತೊಡೆದುಹಾಕಲಿಲ್ಲ. ಅದರ ಬದಲು ಮೋದಿ-ಯೋಗಿ ಡಬಲ್ ಇಂಜಿನ್ ಸರ್ಕಾರ ದೇಶಕ್ಕೆ ಕೋಮುಗಲಭೆ, ದ್ವೇಷ ಮತ್ತು ಹಿಂಸಾಚಾರವನ್ನು ನೀಡಿದೆ’ ಎಂದೂ ಹೇಳಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 14

  Happy
 • 1

  Amused
 • 0

  Sad
 • 0

  Frustrated
 • 8

  Angry

Comments:

0 comments

Write the first review for this !