ಶಬರಿಮಲೆಗೆ ಮಹಿಳೆ ಪ್ರವೇಶದ ಬಗ್ಗ ಸರ್ಕಾರದ ಜೊತೆ ಚರ್ಚೆ ಇಲ್ಲ: ದೇವಸ್ಥಾನದ ತಂತ್ರಿ

7

ಶಬರಿಮಲೆಗೆ ಮಹಿಳೆ ಪ್ರವೇಶದ ಬಗ್ಗ ಸರ್ಕಾರದ ಜೊತೆ ಚರ್ಚೆ ಇಲ್ಲ: ದೇವಸ್ಥಾನದ ತಂತ್ರಿ

Published:
Updated:

ತಿರುವನಂತಪುರ: ಸುಪ್ರಿಂಕೋರ್ಟ್‌ ತೀರ್ಪಿನ ಹಿನ್ನೆಲೆಯಲ್ಲಿ ಶಬರಿಮಲೆ ದೇವಸ್ಥಾನಕ್ಕೆ ಎಲ್ಲ ವಯೋಮಾನದ ಮಹಿಳೆಯರ ಪ್ರವೇಶಕ್ಕೆ ಅನುಮತಿ ನೀಡುವ ಸಂಬಂಧ ರಾಜ್ಯ ಸರ್ಕಾರದೊಂದಿಗೆ ಚರ್ಚೆ ನಡೆಸುವುದರಲ್ಲಿ ಅರ್ಥ ಇಲ್ಲ ಎಂದು ದೇವಸ್ಥಾನದ ತಂತ್ರಿ
ಹೇಳಿದ್ದಾರೆ.

ಹೀಗಾಗಿ ತಂತ್ರಿಗಳ ಕುಟುಂಬದೊಂದಿಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ನಡೆಸಲು ಉದ್ದೇಶಿಸಿದ್ದ ಮಾತುಕತೆಗೆ ತೀವ್ರ
ಹಿನ್ನಡೆಯಾದಂತಾಗಿದೆ. ಈ ನಡುವೆ, ‘ತಂತ್ರಿ ಕುಟುಂಬ ಮಾತುಕತೆ ಬರುತ್ತದೆಯೇ ಎಂಬುದನ್ನು ಕಾದು ನೋಡೋಣ’ ಎಂದು ಮುಖ್ಯಮಂತ್ರಿ ಪಿಣರಾಯಿ ಪ್ರತಿಕ್ರಿಯೆ ನೀಡಿದ್ದಾರೆ.

ಸೋಮವಾರ (ಅ. 8) ಮಾತುಕತೆ ನಡೆಸಲು ತಂತ್ರಿ ಕುಟುಂಬದ ಸದಸ್ಯರು ಹಾಗೂ ಪಂದಳಂ ರಾಜ ಮನೆತನದ
ವರನ್ನು ಮುಖ್ಯಮಂತ್ರಿ ಪಿಣರಾಯಿ ಆಹ್ವಾನಿಸಿದ್ದರು. ಈ ಆಹ್ವಾನವನ್ನು ತಂತ್ರಿ ಕುಟುಂಬದ ಕಂಠರರ್ ಮೋಹನರ್, ರಾಜ ಮನೆತನದ ಶಶಿಕುಮಾರ್ ವರ್ಮಾ ಸ್ಪಷ್ಟವಾಗಿ ತಿರಸ್ಕರಿಸಿದ್ದಾರೆ.

‘ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಸುಪ್ರೀಂಕೋರ್ಟ್‌ಗೆ ಮನವಿ ಸಲ್ಲಿಸಲು ರಾಜ್ಯ ಸರ್ಕಾರ ಸಿದ್ಧವಿಲ್ಲ. ಹೀಗಾಗಿ ಸರ್ಕಾರದೊಂದಿಗೆ ಮಾತುಕತೆ ನಡೆಸುವುದರಲ್ಲಿ ಯಾವುದೇ ಅರ್ಥ ಇಲ್ಲ’ ಎಂದು ಮೋಹನರ್‌ ಹಾಗೂ ವರ್ಮಾ ಪ್ರತಿಪಾದಿಸಿದ್ದಾರೆ.

ಶಬರಿಮಲೆಯಲ್ಲಿರುವ ಸನ್ನಿಧಾನದ ಬಳಿ ಮಹಿಳಾ ಕಾನ್‌ಸ್ಟೆಬಲ್‌ ನಿಯೋಜನೆ ಮಾಡಿರುವ ಕುರಿತಂತೆ ಸಹ ತಂತ್ರಿ ಮೋಹನರ್ ಆಕ್ಷೇಪ ವ್ಯಕ್ತಪಡಿಸಿದರು. ‘ಈ ಕ್ರಮ ಶಬರಿಮಲೆಯ ಧಾರ್ಮಿಕ ವಿಧಿ ಹಾಗೂ ಸಂಪ್ರದಾಯದ ಉಲ್ಲಂಘನೆ’ ಎಂದು ಅಸಮಾಧಾನ
ವ್ಯಕ್ತಪಡಿಸಿದರು.

ಇದನ್ನೂ ಓದಿ: ಸುಪ್ರೀಂಕೋರ್ಟ್ ಕೋರ್ಟ್‌ ನೀಡಿದ ಮಹತ್ವದ ತೀರ್ಪುಗಳಲ್ಲಿ ಇದೂ ಒಂದು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !