ಇನ್ನೆಲ್ಲಿವೆ ಕೆಲಸಗಳು? ಗಡ್ಕರಿ ಕೇಳಿದ ಪ್ರಶ್ನೆಯನ್ನೇ ಭಾರತೀಯರೂ ಕೇಳುತ್ತಿದ್ದಾರೆ

7

ಇನ್ನೆಲ್ಲಿವೆ ಕೆಲಸಗಳು? ಗಡ್ಕರಿ ಕೇಳಿದ ಪ್ರಶ್ನೆಯನ್ನೇ ಭಾರತೀಯರೂ ಕೇಳುತ್ತಿದ್ದಾರೆ

Published:
Updated:

ನವದೆಹಲಿ: ಇನ್ನೆಲ್ಲಿವೆ ಕೆಲಸಗಳು? ಎಂದಿದ್ದಾರೆ ಸಚಿವ ನಿತಿನ್‌ ಗಡ್ಕರಿ. ಪ್ರತಿಯೊಬ್ಬ ಭಾರತೀಯನೂ ಇದೇ ಪ್ರಶ್ನೆಯನ್ನು ಕೇಳುತ್ತಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ಮರಾಠಾ ಮೀಸಲಾತಿ ಹೋರಾಟಕ್ಕೆ ಸಂಬಂಧಿಸಿ ಶನಿವಾರ ಮಾಧ್ಯಮದವರನ್ನುದ್ದೇಶಿಸಿ ಮಾತನಾಡಿದ್ದ ಗಡ್ಕರಿ, ‘ಉದ್ಯೋಗಾವಕಾಶಗಳು ಇಲ್ಲದಿರುವಾಗ ಮೀಸಲಾತಿಯು ಉದ್ಯೋಗ ಭದ್ರತೆಯನ್ನು ಒದಗಿಸುವುದಿಲ್ಲ’ ‘ಮೀಸಲಾತಿ ನೀಡಲಾಗಿದೆ ಎಂದು ಊಹಿಸೋಣ. ಆದರೆ, ಉದ್ಯೋಗ ಅವಕಾಶಗಳೇ ಇಲ್ಲ. ಬ್ಯಾಂಕಿಂಗ್‌ ವಲಯದಲ್ಲಿ ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯಿಂದಾಗಿ ಉದ್ಯೋಗಾವಕಾಶಗಳು ಕ್ಷೀಣಿಸಿವೆ. ಸರ್ಕಾರದ ನೇಮಕಾತಿ ಪ್ರಕ್ರಿಯೆಗಳೂ ನಿಂತಿವೆ. ಇನ್ನೆಲ್ಲಿವೆ ಕೆಲಸಗಳು? ಎಂದು ಪ್ರಶ್ನಿಸಿದ್ದರು.

ಈ ಬಗ್ಗೆ  ಪ್ರತಿಕ್ರಿಯಿಸಿದ ರಾಹುಲ್, ಗಡ್ಕರಿ ಜೀ ಇದು ತುಂಬಾ ಒಳ್ಳೆಯ ಪ್ರಶ್ನೆ, ಪ್ರತಿಯೊಬ್ಬ ಭಾರತೀಯನೂ ಇದೇ ಪ್ರಶ್ನೆ ಕೇಳುತ್ತಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.
 

ಬರಹ ಇಷ್ಟವಾಯಿತೆ?

 • 16

  Happy
 • 0

  Amused
 • 0

  Sad
 • 1

  Frustrated
 • 2

  Angry

Comments:

0 comments

Write the first review for this !