ನಮ್ಮ ಪರ ಜನರಿಗೆ ಒಲವು ಹೆಚ್ಚಾಗಿದೆ: ಪ್ರಧಾನಿ ಮೋದಿ

ಮಂಗಳವಾರ, ಏಪ್ರಿಲ್ 23, 2019
25 °C

ನಮ್ಮ ಪರ ಜನರಿಗೆ ಒಲವು ಹೆಚ್ಚಾಗಿದೆ: ಪ್ರಧಾನಿ ಮೋದಿ

Published:
Updated:

ಸಿಲ್ಚಾರ್‌: ದಕ್ಷಿಣ ಅಸ್ಸಾಂನಲ್ಲಿ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ನಮ್ಮ ಪರ ಜನರ ಒಲವು ಹೆಚ್ಚಾಗಿದೆ. ರ‍್ಯಾಲಿಗೆ ಬಂದು ಸೇರುವ ಜನರಿಂದಲೇ ದೇಶದ ಜನರ ಅನಿಸಿಕೆ ಏನು ಎಂದು ಗೊತ್ತಾಗುತ್ತಿದೆ ಎಂದಿದ್ದಾರೆ.

ಜನರು ಈಗಾಗಲೇ ತಮ್ಮ ಮನಸ್ಸಿನಲ್ಲಿ ನಿರ್ಧರಿಸಿಯಾಗಿದೆ. ವಿಪಕ್ಷಗಳಿಗೆ ಇಲ್ಲಿ ಅವಕಾಶವೇ ಉಳಿದಿಲ್ಲ. ಅಸ್ಸಾಂನಲ್ಲಿ 5 ಕ್ಷೇತ್ರಗಳಿಗೆ ಮತದಾನ ನಡೆದಿದ್ದು, ಈ ಐದು ಕ್ಷೇತ್ರಗಳಲ್ಲಿಯೂ ಎನ್‍ಡಿಎ ವಿಜಯಭೇರಿ ಬಾರಿಸಲಿದೆ. ಭಾರತ ಯಾವ ದಿಶೆಯತ್ತ  ಇದೆ ಎಂಬುದನ್ನು ಈ ಚುನಾವಣೆ ನಿರ್ಧರಿಸುತ್ತದೆ ಎಂದಿದ್ದಾರೆ ಮೋದಿ.

ನಾನು ರಾಷ್ಟ್ರೀಯ ಪೌರತ್ವ (ತಿದ್ದುಪಡಿ) ಮಸೂದೆಯನ್ನು ತರಲು ಬದ್ಧರಾಗಿದ್ದು, ಇದು ಅಸ್ಸಾಂ ಜನರ ಮೇಲೆ ಪ್ರಭಾವ ಬೀರುವುದಿಲ್ಲ. ಈ ವಿಷಯವನ್ನು ಬಿಜೆಪಿ ಚುನಾವಣಾ ಪ್ರಣಾಳಿಕೆಯಲ್ಲಿಯೇ ಹೇಳಲಾಗಿದೆ. ಅಸ್ಸಾಂ ಮತ್ತು ಈಶಾನ್ಯ ರಾಜ್ಯದ ಜನರು ತಮ್ಮ ಅಸ್ಮಿತೆಗಾಗಿ ಹೇಗೆ ಹೋರಾಡುತ್ತಿದ್ದರು ಎಂಬುದು ನೆನಪಿದೆ. ಕಾಂಗ್ರೆಸ್ ನುಸುಳುಕೋರರನ್ನು ವೋಟ್ ಬ್ಯಾಂಕ್ ಆಗಿ ಬಳಸಿ ಅಧಿಕಾರಕ್ಕೆ ಬಂದಿದೆ.

ಬಾಂಗ್ಲಾದೇಶದೊಂದಿಗಿನ ಸಮಸ್ಯೆಯನ್ನು ತಿಳಿದೂ ತಿಳಿದು ಅವರು ಹಾಗೆಯೇ ಉಳಿಸಿಕೊಂಡರು. ಕಾಂಗ್ರೆಸ್ ಅದನ್ನು ಪರಿಹರಿಸಲು ಪ್ರಯತ್ನಿಸಲೇ ಇಲ್ಲ. ಈ ಸಮಯದಲ್ಲಿ ನುಸುಳುಕೋರರು ಭಾರತದೊಳಗೆ ಬರುತ್ತಲೇ ಇದ್ದರು,.ನಿಮ್ಮ ಹಕ್ಕುಗಳಿಗೆ ಅಲ್ಲಿ ಸಮಸ್ಯೆಯಾಯಿತು, ಕಾಂಗ್ರೆಸ್‍ಗೆ ಇದರಿಂದ ಲಾಭವಾಯಿತು ಎಂದು ಮೋದಿ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 8

  Happy
 • 0

  Amused
 • 1

  Sad
 • 0

  Frustrated
 • 3

  Angry

Comments:

0 comments

Write the first review for this !