ಶನಿವಾರ, ಡಿಸೆಂಬರ್ 14, 2019
24 °C

₹100 ಲಂಚಕ್ಕೆ ಬೇಡಿಕೆ : ಪ್ರಕರಣ ದಾಖಲಿಸಿದ ಸಿಬಿಐ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಉತ್ತರ ಪ್ರದೇಶದ ಪ್ರತಾಪಗಡ ಜಿಲ್ಲೆಯಲ್ಲಿ ₹ 100 ಲಂಚ ಕೇಳಿದ ಅಂಚೆ ಇಲಾಖೆಯ ಇಬ್ಬರು ಅಧಿಕಾರಿಗಳ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿಕೊಂಡಿದೆ.

ಕಮಿಷನ್‌ ಏಜೆಂಟ್‌ ಒಬ್ಬರ ಪತಿ ನೀಡಿದ ದೂರಿನ ಅನ್ವಯ ಕುಂಡಾ ಪಟ್ಟಣದಲ್ಲಿನ ಉಪ ಅಂಚೆ ಕಚೇರಿ ಸೂಪರಿಟೆಂಡೆಂಟ್‌ ಸಂತೋಷ್‌ ಕುಮಾರ್‌ ಸರೋಜ್‌ ಮತ್ತು ಅಂಚೆ ಅಧಿಕಾರಿ ಸೂರಜ್‌ ಮಿಶ್ರಾ ಎಂಬುವವರ ವಿರುದ್ಧ ಸಿಬಿಐ ಅಧಿಕಾರಿಗಳು ಎಫ್‌ಐಆರ್‌
ದಾಖಲಿಸಿಕೊಂಡಿದ್ದಾರೆ. ₹20 ಸಾವಿರ ಠೇವಣಿ ಇರಿಸಲು ₹100 ಲಂಚ ನೀಡಬೇಕೆಂದು ಈ ಇಬ್ಬರು ಬೇಡಿಕೆ ಇಟ್ಟಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.

‘ಪ್ರಕರಣ ದೊಡ್ಡದಿರಲಿ ಚಿಕ್ಕದಿರಲಿ ನಮಗೆ ಎಲ್ಲವೂ ಸಮಾನ’ ಎಂದು ಸಿಬಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು