ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಪಾನಿನ ಹಡಗಿನಲ್ಲಿ ಸಿಲುಕಿದ್ದ 119 ಮಂದಿ ಭಾರತೀಯರು ಸ್ವದೇಶಕ್ಕೆ

Last Updated 27 ಫೆಬ್ರುವರಿ 2020, 3:18 IST
ಅಕ್ಷರ ಗಾತ್ರ

ನವದೆಹಲಿ: ಕೊರೊನಾ ವೈರಸ್‌‌ನಿಂದಾಗಿ ಜಪಾನಿನ ಡೈಮಂಡ್ ಪ್ರಿನ್ಸಸ್ಹಡಗಿನಲ್ಲಿ ಸಿಲುಕಿಕೊಂಡಿದ್ದ 119 ಭಾರತೀಯರು ಹಾಗೂ ಐದು ಮಂದಿ ವಿದೇಶಿಯರನ್ನು ಹೊತ್ತ ಏರ್ ಇಂಡಿಯಾ ವಿಮಾನ ಗುರುವಾರ ಬೆಳಗಿನ ಜಾವ ದೆಹಲಿ ತಲುಪಿದೆ.

ಟೋಕಿಯೋದ ಹಡಗಿನಲ್ಲಿ ಪ್ರಯಾಣಿಸುತ್ತಿದ್ದ 3,711 ಮಂದಿ ಪ್ರಯಾಣಿಕರಲ್ಲಿ ವ್ಯಕ್ತಿಯೊಬ್ಬರಿಗೆ ಕೊರೊನಾ ವೈರಸ್ ಸೋಂಕು ಇರುವುದು ಖಚಿತ ಪಟ್ಟಿತ್ತು. ಈ ಹಡಗಿನಲ್ಲಿ 132 ಭಾರತೀಯರೂ ಪ್ರಯಾಣಿಸುತ್ತಿದ್ದರು. ಕೂಡಲೆ ಸೋಂಕಿತ ಎಲ್ಲಾ ಪ್ರಯಾಣಿಕರನ್ನು ಜಪಾನ್ ಸರ್ಕಾರವೇಅಲ್ಲಿನ ಆಸ್ಪತ್ರೆಗಳಿಗೆ ದಾಖಲಿಸಿಕೊಂಡು ಚಿಕಿತ್ಸೆ ನೀಡುತ್ತಿದೆ. ಉಳಿದ ಎಲ್ಲಾ ಪ್ರಯಾಣಿಕರನ್ನು ಅವರವರ ತವರಿಗೆ ಕಳುಹಿಸಿಕೊಡಲಾಗಿತ್ತು. ಈ ಸಮಯದಲ್ಲಿ 119 ಭಾರತೀಯರಿಗೆ ಹಡಗಿನಿಂದ ಬರಲು ಸಾಧ್ಯವಾಗಿರಲಿಲ್ಲ. ಕೂಡಲೆ ಕೇಂದ್ರ ಸರ್ಕಾರ ಏರ್ ಇಂಡಿಯಾ ವಿಶೇಷ ವಿಮಾನವನ್ನುಜಪಾನಿಗೆ ಕಳುಹಿಸಿ ಅಲ್ಲಿದ್ದ ಭಾರತೀಯರನ್ನು ಕರೆತರಲು ವ್ಯವಸ್ಥೆ ಮಾಡಿತ್ತು.

ಈ ಸಮಯದಲ್ಲಿ ಭಾರತೀಯರ ಜೊತೆ ಶ್ರೀಲಂಕಾ, ನೇಪಾಳ, ದಕ್ಷಿಣ ಆಫ್ರಿಕಾ ಹಾಗೂ ಪೆರುವಿನ ಐದು ಮಂದಿ ಸುರಕ್ಷಿತವಾಗಿ ಹೊರಬರಲು ಯಾವುದೇ ವ್ಯವಸ್ಥೆ ಇಲ್ಲದೆಸಂಕಷ್ಟದಲ್ಲಿ ಸಿಲುಕಿದ್ದರು. ಜಪಾನಿನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಅಧಿಕಾರಿಗಳು ಈ ಐದು ಮಂದಿಯನ್ನು ವಿಶೇಷ ವಿಮಾನದಲ್ಲಿ ಭಾರತಕ್ಕೆ ಕಳುಹಿಸುವ ವ್ಯವಸ್ಥೆ ಮಾಡಿದ್ದಾರೆ.

16 ಮಂದಿ ಭಾರತೀಯರಿಗೆ ಕೊರೊನಾ ವೈರಸ್ ಇರುವುದು ಖಚಿತಪಟ್ಟಿತ್ತು. ಅವರನ್ನು ಜಪಾನಿನಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ. ಅವರು ಗುಣಮುಖರಾದ ನಂತರಭಾರತಕ್ಕೆ ವಾಪಸ್ ಕಳುಹಿಸಲಾಗುವುದು ಎಂದು ಜಪಾನ್ ಸರ್ಕಾರ ಹೇಳಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್ ಜಪಾನ್ ಸರ್ಕಾರದ ಸಹಕಾರಕ್ಕೆ ಧನ್ಯವಾದ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT