ಸಾವಿನ ದಿಬ್ಬಣವಾಯ್ತು ಮದುವೆ ಮೆರವಣಿಗೆ; ಟ್ರಕ್‌ ಹರಿದು 13 ಮಂದಿ ಸಾವು

ಶನಿವಾರ, ಮೇ 25, 2019
22 °C

ಸಾವಿನ ದಿಬ್ಬಣವಾಯ್ತು ಮದುವೆ ಮೆರವಣಿಗೆ; ಟ್ರಕ್‌ ಹರಿದು 13 ಮಂದಿ ಸಾವು

Published:
Updated:

ಪ್ರತಾಪಗಡ: ರಾಜಸ್ಥಾನದ ಪ್ರತಾಪಗಡದಲ್ಲಿ ಟ್ರಕ್‌ ಹರಿದು 13 ಮಂದಿ ಸಾವಿಗೀಡಾಗಿದ್ದು, 15 ಮಂದಿ ಗಾಯಗೊಂಡಿರುವ ದುರ್ಘಟನೆ ಸೋಮವಾರ ರಾತ್ರಿ ಸಂಭವಿಸಿದೆ. 

ಜೈಪುರದಿಂದ 417 ಕಿ.ಮೀ. ದೂರದಲ್ಲಿರುವ ಅಂಬವಾಲಿ ಗ್ರಾಮದ ಸಮೀಪ ಪ್ರತಾಪಗಡ–ಜೈಪುರ ಹೆದ್ದಾರಿಯಲ್ಲಿ ಈ ದುರ್ಘಟನೆ ಸಂಭವಿಸಿದೆ.

ಹೆದ್ದಾರಿ ಅಕ್ಕಪಕ್ಕದ ಮನೆಗಳಲ್ಲಿ ವಾಸಿಸುತ್ತಿರುವ ಜನರು ರಸ್ತೆ ಪಕ್ಕ ಮದುವೆ ಮೆರವಣಿಯಲ್ಲಿ ಸಾಗುತ್ತಿದ್ದರು. ’ಬಿಂದೋಳಿ’ ಎಂದು ಕರೆಯಲಾಗುವ ಮದುವೆ ಮೆರವಣಿಗೆ ನಡೆಯುತ್ತಿದ್ದ ಸಮಯದಲ್ಲಿ ಜನರ ಮೇಲೆ ಟ್ರಕ್ ಹರಿದಿದೆ. 

ಅಪಘಾತ ಸಂಭವಿಸಿದ ಸ್ಥಳದಲ್ಲಿಯೇ 9 ಮಂದಿ ಮೃತಪಟ್ಟಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ನಾಲ್ವರು ಸಾವಿಗೀಡಾಗಿದ್ದಾರೆ. ಮದುವಣಗಿತ್ತಿ ಸೇರಿ 15 ಮಂದಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. 

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 15

  Sad
 • 3

  Frustrated
 • 0

  Angry

Comments:

0 comments

Write the first review for this !