‘ಸಮುದಾಯ ನೆರವು ನೀಡಲಿಲ್ಲ’ ಎಂದು ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮುಸ್ಲಿಂ ಕುಟುಂಬ

7

‘ಸಮುದಾಯ ನೆರವು ನೀಡಲಿಲ್ಲ’ ಎಂದು ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮುಸ್ಲಿಂ ಕುಟುಂಬ

Published:
Updated:

ಲಖನೌ: ಕುಟುಂಬ ಸದಸ್ಯರೊಬ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಹೋರಾಟ ನಡೆಸಲು ಯಾರೊಬ್ಬರೂ ತಮ್ಮ ನೆರವಿಗೆ ಬರಲಿಲ್ಲ ಎಂದು ಆರೋ‍ಪಿಸಿರುವ ಉತ್ತರಪ್ರದೇಶದ ಬಾಗ್‌ಪತ್‌ ಜಿಲ್ಲೆಯ ಮುಸ್ಲಿಂ ಕುಟುಂಬವೊಂದು ಹಿಂದೂ ಧರ್ಮಕ್ಕೆ ಮತಾಂತರಗೊಂಡಿದೆ.

ಕುಟುಂಬದಲ್ಲಿ ಒಟ್ಟು 13 ಸದಸ್ಯರಿದ್ದಾರೆ ಎಂದು ಹೇಳಲಾಗಿದ್ದು, ತಮ್ಮ ಹೆಸರುಗಳನ್ನು ಬದಲಿಸಿಕೊಳ್ಳುವ ಸಲುವಾಗಿ ಮಂಗಳವಾರ ಕಾರ್ಯಕ್ರಮವನ್ನು ಏರ್ಪಡಿಸಿತ್ತು. ಯುವ ಹಿಂದೂ ವಾಹಿನಿ–ಭಾರತ್‌ ಸಂಘಟನೆ ನೇತೃತ್ವದಲ್ಲಿ ನಡೆದ ಈ ಸಮಾರಂಭದಲ್ಲಿ ಹಿಂದೂ ಸಂಪ್ರದಾಯದಂತೆ ಹೋಮ–ಹವನ, ಪೂಜಾ ಕಾರ್ಯಗಳೂ ನಡೆದವು.

ಬಾಗ್‌ಪತ್‌ ಜಿಲ್ಲೆಯ ಬದರ್ಕಾ ಹಳ್ಳಿಯ ಈ ಕುಟುಂಬ ವರ್ಷಾರಂಭದಲ್ಲಿ ನವಾಡ ಎಂಬ ಗ್ರಾಮಕ್ಕೆ ಬಂದು ನೆಲೆಸಿತ್ತು. ಕೆಲವು ತಿಂಗಳ ಹಿಂದೆ ಈ ಕುಟುಂಬದ ಸದ್ಯರೊಬ್ಬರು ಮೃತಪಟ್ಟಿದ್ದರು.

ಕುಟುಂಬದವರೇ ಹೇಳುವಂತೆ, ಕೆಲವು ತಿಂಗಳುಗಳ ಹಿಂದೆ ಕುಟುಂಬದ ಸದಸ್ಯರೊಬ್ಬರು ಕೊಲೆಯಾಗಿದ್ದರು. ಪ್ರಕರಣವನ್ನು ಆತ್ಮಹತ್ಯೆ ಎಂದು ತೀರ್ಮಾನಿಸಲಾಗಿತ್ತು. ಇದಕ್ಕೆ ಸಂಬಂಧಿಸಿ ಕಾನೂನು ಹೋರಾಟ ನಡೆಸಲು ಸಮದಾಯದವರಾಗಲೀ, ಪೊಲೀಸರಾಗಲಿ ನೆರವು ನೀಡಲಿಲ್ಲ. ಹೀಗಾಗಿ ಧರ್ಮದಿಂದ ಬೇರ್ಪಡಲು ನಿರ್ಧರಿಸಲಾಗಿತ್ತು.

‘ನಮಗೆ ನ್ಯಾಯ ದೊರೆತಿಲ್ಲ. ನನ್ನ ಸಹೋದರ ಕೊಲೆಯಾಗಿದ್ದ. ಆದರೆ ಇಡೀ ಪ್ರಕರಣವನ್ನು ಬದಲಿಸಲಾಗಿತ್ತು. ಯಾರೂ ನಮ್ಮ ಬೆಂಬಲಕ್ಕೆ ಬರಲಿಲ್ಲ. ಹೀಗಾಗಿ ಧರ್ಮ ತೊರೆಯಲು ನಿರ್ಧರಿಸಿದ್ದೆವು’ ಎಂಬುದಾಗಿ ಸದ್ಯ ನರೇಂದ್ರ ಎಂದು ಹೆಸರು ಬದಲಿಸಿಕೊಂಡಿರುವ ನೌಶಾದ್‌ ಹೇಳಿಕೊಂಡಿದ್ದಾರೆ.

ಈ ಸಂಬಂಧ ಕುಟುಂಬವು ಅಫಿಡವಿಟ್‌ ಸಲ್ಲಿಸಿದೆ. ಅದರಲ್ಲಿ, ನಾವು ಮತಾಂತರಗೊಳ್ಳಲು ಬಯಸಿದ್ದೇವೆ. ನಮ್ಮ ಕುಟುಂಬ ಸದಸ್ಯನ ಕೊಲೆ ಪ್ರಕರಣ ಸಂಬಂಧ ನಡೆದ ತನಿಖೆ ತೃಪ್ತಿ ತಂದಿಲ್ಲ ಎಂದು ಉಲ್ಲೇಖಿಸಲಾಗಿದೆ. ಕುಟುಂಬದ ಕಾನೂನು ಹೋರಾಟಕ್ಕೆ ನೆರವು ನೀಡುವುದಾಗಿ,  ಯುವ ಹಿಂದೂ ವಾಹಿನಿ–ಭಾರತ್‌ನ ಯೋಗೇಂದ್ರ ತೋಮರ್‌ ಭರವಸೆ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 24

  Happy
 • 1

  Amused
 • 0

  Sad
 • 0

  Frustrated
 • 6

  Angry

Comments:

0 comments

Write the first review for this !