ಶೋಭಾ ಖಾತೆಗೆ ಕನ್ನ: ₹15.5 ಲಕ್ಷ ಮಂಗಮಾಯ!

7

ಶೋಭಾ ಖಾತೆಗೆ ಕನ್ನ: ₹15.5 ಲಕ್ಷ ಮಂಗಮಾಯ!

Published:
Updated:

ನವದೆಹಲಿ: ಉಡುಪಿ–ಚಿಕ್ಕಮಗಳೂರು ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಅವರ ದೆಹಲಿಯ ಭಾರತೀಯ ಸ್ಟೇಟ್‌ ಬ್ಯಾಂಕ್‌ ಖಾತೆಗೆ ಕನ್ನ ಹಾಕಿರುವ ಸೈಬರ್‌ ಕಳ್ಳರು ₹15.50 ಲಕ್ಷ ಎಗರಿಸಿದ್ದಾರೆ.

ಎಸ್‌ಬಿಐ ಖಾತೆಯಿಂದ ಹಣ ಕಳುವಾಗಿರುವ ವಿಷಯ ತಿಳಿದ ಕರಂದ್ಲಾಜೆ ಸೋಮವಾರ ಪಾರ್ಲಿಮೆಂಟ್‌ ಸ್ಟ್ರೀಟ್ ಪೊಲಿಸ್‌ ಠಾಣೆಗೆ ದೂರು ನೀಡಿದ್ದಾರೆ.

ಬಹಳ ದಿನಗಳ ನಂತರ ಪಾರ್ಲಿಮೆಂಟ್‌ ಹೌಸ್‌ ಎಸ್‌ಬಿಐ ಶಾಖೆಗೆ ತೆರಳಿದ್ದ ಶೋಭಾ ಅವರು ಬ್ಯಾಂಕ್‌ ಸ್ಟೇಟ್‌ಮೆಂಟ್‌ ಪಡೆದಾಗ ಅವರಿಗೆ ಅಚ್ಚರಿಯೊಂದು ಕಾದಿತ್ತು.

ಎರಡು ತಿಂಗಳ ಹಿಂದೆ ಅವರ ಖಾತೆಯಿಂದ ದೊಡ್ಡ ಮೊತ್ತದ ಹಣವನ್ನು ಕದಿಯಲಾಗಿತ್ತು. ಇದು ಅವರ ಗಮನಕ್ಕೆ ಬಂದಿರಲಿಲ್ಲ. ಶೋಭಾ ಕರಂದ್ಲಾಜೆ ಅವರ ಖಾತೆಯಿಂದ ಹಣ ತೆಗೆದಾಗ ಬ್ಯಾಂಕ್‌ನಿಂದ ಎಸ್‌ಎಂಎಸ್‌ ಸಂದೇಶ ಕೂಡ ಬಂದಿರಲಿಲ್ಲ ಎಂದು ಹೇಳಲಾಗಿದೆ.

ಪ್ರಕರಣದ ದಾಖಲಿಸಿಕೊಂಡಿರುವ ದೆಹಲಿ ಪೊಲೀಸರು ಈ ಬಗ್ಗೆ ತನಿಖೆ ನಡೆಸಿದ್ದಾರೆ

 

 

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !