ಭ್ರಷ್ಟಾಚಾರ ಆರೋಪ:15 ಮಂದಿ ತೆರಿಗೆ ಅಧಿಕಾರಿಗಳಿಗೆ ಕೇಂದ್ರದಿಂದ ಬಲವಂತದ ನಿವೃತ್ತಿ

ಬುಧವಾರ, ಜೂಲೈ 17, 2019
29 °C

ಭ್ರಷ್ಟಾಚಾರ ಆರೋಪ:15 ಮಂದಿ ತೆರಿಗೆ ಅಧಿಕಾರಿಗಳಿಗೆ ಕೇಂದ್ರದಿಂದ ಬಲವಂತದ ನಿವೃತ್ತಿ

Published:
Updated:

ನವದೆಹಲಿ: ಆದಾಯ ತೆರಿಗೆ ಇಲಾಖೆಯಲ್ಲಿ ಭ್ರಷ್ಟಾಚಾರದ ಗಂಭೀರ ಆರೋಪಗಳನ್ನು ಎದುರಿಸುತ್ತಿದ್ದ 15 ಮಂದಿ ಅಧಿಕಾರಿಗಳಿಗೆ ಕೇಂದ್ರ ಸರ್ಕಾರವು ಮಂಗಳವಾರ ಕಡ್ಡಾಯ ನಿವೃತ್ತಿ ಪಡೆಯಲು ಸೂಚಿಸಿದೆ. 

ವಾರದ ಹಿಂದಷ್ಟೇ ಅದಾಯ ತೆರಿಗೆ ಇಲಾಖೆಯಿಂದ 12 ಅಧಿಕಾರಿಗಳು ಸರ್ಕಾರ ಕೆಲಸದಿಂದ ವಜಾಗೊಳಿಸಲಾಗಿತ್ತು. ಅದರ ಮುಂದುವರಿದ ಭಾಗವಾಗಿ ಇಂದು 15 ಮಂದಿ ಅಧಿಕಾರಿಗಳನ್ನು ನಿವೃತ್ತಿ ಪಡೆಯುವಂತೆ ಸೂಚಿಸಲಾಗಿದೆ. 

ಕೇಂದ್ರ ಪರೋಕ್ಷ ತೆರಿಗೆ ಮತ್ತು ಸುಂಕ ವಿಭಾಗದ ಪ್ರಧಾನ ಆಯುಕ್ತರು, ಆಯುಕ್ತರು, ಹೆಚ್ಚುವರಿ ಆಯುಕ್ತರು, ಸಹಾಯಕ ಆಯುಕ್ತರು ಇದರಲ್ಲಿದ್ದಾರೆ. 

ದೇಶವೊಂದರ ಭ್ರಷ್ಟಾಚಾರ ಸೂಚ್ಯಂಕದ ಮೇಲೆ ನಿಗಾ ವಹಿಸುವ ‘ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್‌’ ಸಂಸ್ಥೆಯ ಪ್ರಕಾರ ಭಾರತವು 2018ರಲ್ಲಿ  ಮೂರು ಅಂಕಗಳನ್ನು ಗಳಿಸುವ ಮೂಲಕ ಜಾಗತಿಕ ಭ್ರಷ್ಟಾಚಾರ ಸೂಚ್ಯಂಕದಲ್ಲಿ 180 ದೇಶಗಳ ಪೈಕಿ ಪೈಕಿ 78ನೇ ಸ್ಥಾನದಲ್ಲಿದೆ.  

ಬರಹ ಇಷ್ಟವಾಯಿತೆ?

 • 24

  Happy
 • 2

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !