ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

18 ಶಾಸಕರ ಅನರ್ಹ ಪ್ರಕರಣ: ಗುರುವಾರ ತೀರ್ಪು

Last Updated 25 ಅಕ್ಟೋಬರ್ 2018, 6:59 IST
ಅಕ್ಷರ ಗಾತ್ರ

ಚೆನ್ನೈ:ದಿನಕರನ್‌ ಬಣದಲ್ಲಿ ಗುರುತಿಸಿಕೊಂಡಿದ್ದ ಎಎಐಡಿಎಂಕೆ ಪಕ್ಷದ 18 ಶಾಸಕರನ್ನುಒಂದು ವರ್ಷದ ಹಿಂದೆ ಅನರ್ಹಗೊಳಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ತೀರ್ಪು ಹೊರಬೀಳಲಿದೆ.

ಪ್ರಕರಣಕ್ಕೆ ಸಂಬಂಧಿಸಿಂತೆನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ ಹಾಗೂ ಎಂ. ಸುಂದರ್‌ ಅವರು ಭಿನ್ನ ನಿಲುವು ತಳೆದ ಕಾರಣ ಎಂ. ಸತ್ಯನಾರಾಯಣನ್‌ ಅವರನ್ನು ಮೂರನೇ ನ್ಯಾಯಮೂರ್ತಿಯನ್ನಾಗಿ ಸುಪ್ರೀಂ ಕೋರ್ಟ್‌ ನೇಮಕ ಮಾಡಿತ್ತು.

ತಮಿಳುನಾಡು ಮಾಜಿ ಮುಖ್ಯಮಂತ್ರಿ ಪನ್ನೀರಸೆಲ್ವಂ ಹಾಗೂಮುಖ್ಯಮಂತ್ರಿ ವಿರುದ್ಧ ಪಳನಿಸ್ವಾಮಿ ಬಣ ವಿಲೀನದ ಬಳಿಕ,ದಿನಕರನ್‌ ಜೊತೆ ಗುರುತಿಸಿಕೊಂಡಿದ್ದ 18 ಶಾಸಕರ ಭವಿಷ್ಯವು ಮೂರನೇ ನ್ಯಾಯಮೂರ್ತಿಗಳ ತೀರ್ಪನ್ನು ಅವಲಂಬಿಸಿದೆ.

1986ರ ಪಕ್ಷಾಂತರ ವಿರೋಧಿ ಮತ್ತು ಅನರ್ಹತೆ ನಿಯಮಗಳ ಅಡಿಯಲ್ಲಿ 18 ಶಾಸಕರನ್ನು ಅನರ್ಹಗೊಳಿಸಲಾಗಿತ್ತು.

‘ಸಂವಿಧಾನದ 10ನೇ ಅನುಚ್ಛೇದದ ಅಡಿಯಲ್ಲೇ ಈ ನಿಯಮ ರೂಪಿಸಲಾಗಿದೆ. ಸಭಾಧ್ಯಕ್ಷರು 2017,ಸೆಪ್ಟೆಂಬರ್‌ 18ರಿಂದಲೇ ಅನ್ವಯವಾಗುವಂತೆ ಶಾಸಕರನ್ನು ಅನರ್ಹಗೊಳಿಸಿ ಆದೇಶ ಹೊರಡಿಸಿರುವುದರಿಂದ ತಕ್ಷಣದಿಂದಲೇ ಅವರು ಸದಸ್ಯತ್ವ ಕಳೆದುಕೊಂಡಿದ್ದಾರೆ’ ಎಂದು ತಮಿಳುನಾಡು ವಿಧಾನಸಭಾ ಕಾರ್ಯದರ್ಶಿ ಕೆ. ಭೂಪತಿ ಅವರು ಆ ವೇಳೆ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT