ಅನುಮೋದನೆ ಪಡೆಯದೆ ದೋಷಾರೋಪ ಪಟ್ಟಿ ಸಲ್ಲಿಸಿದ್ದೇಕೆ? ಪೊಲೀಸರಿಗೆ ಕೋರ್ಟ್‌ ಪ್ರಶ್ನೆ

7

ಅನುಮೋದನೆ ಪಡೆಯದೆ ದೋಷಾರೋಪ ಪಟ್ಟಿ ಸಲ್ಲಿಸಿದ್ದೇಕೆ? ಪೊಲೀಸರಿಗೆ ಕೋರ್ಟ್‌ ಪ್ರಶ್ನೆ

Published:
Updated:
Prajavani

ನವದೆಹಲಿ: ‘ಅಗತ್ಯ ಕಾನೂನುಗಳನ್ನು ಪಾಲಿಸದೆ ಜೆಎನ್‌ಯು ದೇಶದ್ರೋಹ ಪ್ರಕರಣಕ್ಕೆ ಸಂಬಂಧಿಸಿದಂತೆ ಕನ್ಹಯ್ಯಕುಮಾರ್‌ ಮತ್ತು ಇತರರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದೇಕೆ’ ಎಂದು ಜಿಲ್ಲಾ ನ್ಯಾಯಾಲಯವು ಶನಿವಾರ ದೆಹಲಿ ಪೊಲೀಸರನ್ನು ಪ್ರಶ್ನಿಸಿತು. 

‘ಅನುಮೋದನೆ ಪಡೆಯದೇ ಹೇಗೆ ಆರೋಪ ಪಟ್ಟಿ ಸಲ್ಲಿಸಿದಿರಿ, ಕಾನೂನು ಇಲಾಖೆ ಇರುವುದು ನಿಮಗೆ ತಿಳಿದಿಲ್ಲವೇ‘ ಎಂದು ಪ್ರಶ್ನಿಸಿದ ಜಿಲ್ಲಾ ನ್ಯಾಯಾಧೀಶ ದೀಪಕ್‌ ಶೆರಾವತ್‌, ಅಗತ್ಯ ಕಾನೂನು ಪ್ರಕ್ರಿಯೆಗಳನ್ನು ಪೂರೈಸುವುದಕ್ಕೆ ಫೆಬ್ರುವರಿ 6ರವರೆಗೆ ದೆಹಲಿ ಪೊಲೀಸರಿಗೆ ಕಾಲಾವಕಾಶ ನೀಡಿದರು. 

ಇದನ್ನೂ ಓದಿ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ಕೂಗಿದ್ದು ಎಬಿವಿಪಿ ಸದಸ್ಯರೇ

ಇನ್ನು, ಹತ್ತು ದಿನಗಳೊಳಗೆ ಅನುಮೋದನೆ ಪಡೆಯುವುದಾಗಿ ದೆಹಲಿ ಪೊಲೀಸರು ಕೋರ್ಟ್‌ಗೆ ತಿಳಿಸಿದರು.

2016ರಲ್ಲಿ ಜೆಎನ್‌ಯು ಕ್ಯಾಂಪಸ್‌ನಲ್ಲಿ ದೇಶವಿರೋಧಿ ಘೋಷಣೆಗಳನ್ನು ಕೂಗಿದ ಆರೋಪದ ಮೇಲೆ ವಿದ್ಯಾರ್ಥಿಗಳ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಿದ್ದ ಪೊಲೀಸರು, ಕಳೆದ ಜನವರಿಗೆ 14ರಂದು, ಜೆಎನ್‌ಯು ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಕನ್ಹಯ್ಯಕುಮಾರ್‌ ಮತ್ತು ಇತರರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. 

ಬರಹ ಇಷ್ಟವಾಯಿತೆ?

 • 14

  Happy
 • 1

  Amused
 • 0

  Sad
 • 2

  Frustrated
 • 1

  Angry

Comments:

0 comments

Write the first review for this !