ಕೇರಳ: ಪ್ರೇಮ ಪ್ರಸ್ತಾವ ನಿರಾಕರಣೆ; ಯುವತಿಗೆ ಬೆಂಕಿ ಹಚ್ಚಿದ ಯುವಕ

ಮಂಗಳವಾರ, ಮಾರ್ಚ್ 19, 2019
26 °C

ಕೇರಳ: ಪ್ರೇಮ ಪ್ರಸ್ತಾವ ನಿರಾಕರಣೆ; ಯುವತಿಗೆ ಬೆಂಕಿ ಹಚ್ಚಿದ ಯುವಕ

Published:
Updated:

ತಿರುವಳ್ಳ (ಕೇರಳ): ಪ್ರೇಮ ಪ್ರಸ್ತಾವವನ್ನು ನಿರಾಕರಿಸಿದ್ದಕ್ಕಾಗಿ ವಿದ್ಯಾರ್ಥಿನಿ ಮೇಲೆ 20 ವರ್ಷದ ಯುವಕನೊಬ್ಬ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿ ಕೊಲ್ಲಲು ಯತ್ನಿಸಿದ ಪ್ರಕರಣ ಮಂಗಳವಾರ ನಡೆದಿದೆ.

19 ವರ್ಷದ ಯುವತಿ ರೇಡಿಯಾಲಜಿಯ ವಿದ್ಯಾರ್ಥಿನಿಯಾಗಿದ್ದು, ಶೇ 60ರಷ್ಟು ಸುಟ್ಟ ಗಾಯಗಳಾಗಿವೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಎರ್ನಾಕುಲಂನ ವೈದ್ಯಕೀಯ ಕೇಂದ್ರಕ್ಕೆ ದಾಖಲಿಸಲಾಗಿದೆ.

ಕೃತ್ಯ ಎಸಗಿದ ಆರೋಪಿ ಅಜಿನ್‌ ರೆಜಿ ಮ್ಯಾಥ್ಯು ಎಂಬಾತನನ್ನು ಬಂಧಿಸಲಾಗಿದೆ. ಆರೋಪಿ ವಿರುದ್ಧ ಕೊಲೆ ಯತ್ನದ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಮ್ಯಾಥ್ಯು ಪ್ರೇಮ ಪ್ರಸ್ತಾವ ಇಟ್ಟಿದ್ದ. ಆದರೆ, ಅದನ್ನು ನಾನು ಒಪ್ಪಿಕೊಳ್ಳದೆ ನಿರಾಕರಿಸಿದ್ದೆ’ ಎಂದು ತಿರುವಳ್ಳದ ನಿವಾಸಿಯಾದ ಯುವತಿ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.

ಯುವತಿ ಬಳಿ ನಡೆದುಕೊಂಡು ಬಂದ ಆರೋಪಿ ತಕ್ಷಣ ಬಾಟಲಿ ತೆರೆದು ಆಕೆಯ ಮೇಲೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ ಎಂದು ಪ್ರತ್ಯಕ್ಷದರ್ಶಿಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 9

  Angry

Comments:

0 comments

Write the first review for this !