ಅಸ್ಸಾಂ: ಸಾಮೂಹಿಕ ಅತ್ಯಾಚಾರ ಪ್ರಕರಣ, 19 ಹರೆಯದ ಅಪರಾಧಿಗೆ ಮರಣದಂಡನೆ

7

ಅಸ್ಸಾಂ: ಸಾಮೂಹಿಕ ಅತ್ಯಾಚಾರ ಪ್ರಕರಣ, 19 ಹರೆಯದ ಅಪರಾಧಿಗೆ ಮರಣದಂಡನೆ

Published:
Updated:

ನಾಗಾವ್‌ (ಅಸ್ಸಾಂ): 11 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ, ಬೆಂಕಿ ಹಚ್ಚಿ ಕೊಲೆ ಮಾಡಿದ್ದ ಪ್ರಕರಣದ 19 ವರ್ಷದ ಪ್ರಮುಖ ಆರೋಪಿ ಜಾಕಿರ್‌ ಹುಸೇನ್‌ಗೆ ಇಲ್ಲಿನ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿದೆ.

ಪೋಕ್ಸೊ ಕಾಯ್ದೆಯಡಿ ಅತ್ಯಾಚಾರಕ್ಕೆ ಜೈಲು ಮತ್ತು ಕೊಲೆಗೆ ಮರಣದಂಡನೆ ಶಿಕ್ಷೆಯನ್ನು ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶೆ ರೀಟಾ ಕರ್‌ ವಿಧಿಸಿದ್ದಾರೆ. ಸಾಕ್ಷ್ಯಾಧಾರ ಕೊರತೆಯಿಂದ ಉಳಿದ ಐವರು ಆರೋಪಿಗಳನ್ನು ದೋಷಮುಕ್ತಗೊಳಿಸಲಾಗಿದೆ.

ಇಬ್ಬರು ಬಾಲಕರ ಮೇಲಿನ ಆರೋಪ ಸಾಬೀತಾಗಿದ್ದು, ಅವರನ್ನು ಮೂರು ವರ್ಷಗಳ ಕಾಲ ಸುಧಾರಣಾ ಗೃಹಕ್ಕೆ ಕಳುಹಿಸಲು ಬಾಲ ನ್ಯಾಯಾಲಯ ಈ ವಾರದ ಆರಂಭದಲ್ಲಿ ಆದೇಶಿಸಿದೆ.

ನಾಗಾವ್‌ ಜಿಲ್ಲೆಯ ಧಾನಿಯಭೇಟಿ ಲಾಲುಂಗ್‌ ಎಂಬ ಹಳ್ಳಿಯ ತನ್ನ ಮನೆಯಲ್ಲಿ ಐದನೇ ತರಗತಿ ಬಾಲಕಿ ಒಬ್ಬಳೇ ಇದ್ದ ಸಂದರ್ಭದಲ್ಲಿ ಈ ದೌರ್ಜನ್ಯ ನಡೆದಿತ್ತು. ಗುವಾಹಟಿ ವೈದ್ಯಕೀಯ ಕಾಲೇಜು ಆಸ್ಪತ್ರೆ
ಯಲ್ಲಿ ಮರುದಿನ ಆಕೆ ಮೃತಪಟ್ಟಿದ್ದಳು. ಪೊಲೀಸರು 8 ಮಂದಿಯ ವಿರುದ್ಧ ಆರೋಪಪಟ್ಟಿ ದಾಖಲಿಸಿದ್ದರು.

ಈ ಘಟನೆ ರಾಜ್ಯದಾದ್ಯಂತ ತೀವ್ರ ಪ್ರತಿಭಟನೆಗೆ ಕಾರಣವಾಗಿತ್ತು. ಅತ್ಯಾಚಾರ ವಿರೋಧಿ ಕಠಿಣ ಕಾನೂನನ್ನು ಮುಂದಿನ ಅಧಿವೇಶನದಲ್ಲಿ ಹೊರತರುವುದಾಗಿ ಅಸ್ಸಾಂ ಸರ್ಕಾರ ಘೋಷಿಸಿತ್ತು. ಹಾಗೆಯೇ, ಮಹಿಳಾ ಪೊಲೀಸ್‌ ಸಬ್‌ಇನ್‌ಸ್ಪೆಕ್ಟರ್‌ಗಳನ್ನು ನೇಮಿಸಿಕೊಳ್ಳುವುದಾಗಿ, ಪೊಲೀಸ್‌ ಇಲಾಖೆಯಲ್ಲಿ ಶೇ 30ರಷ್ಟು ಮಹಿಳೆಯರು ಇರುವಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿತ್ತು.

ಅಧಿಕಾರಿ ಬಂಧನ (ಮುಂಬೈ ವರದಿ): ಮನೆಗೆಲಸದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ, ಆದಾಯ ತೆರಿಗೆ ಇಲಾಖೆ ಉಪ ಆಯುಕ್ತರನ್ನು ಬಂಧಿಸಲಾಗಿದೆ.

ಭಾರತೀಯ ಕಂದಾಯ ಸೇವೆ (ಐಆರ್‌ಎಸ್‌) ಅಧಿಕಾರಿಯಾದ ವೀರಭದ್ರ ವಿಸಾಲ್‌ವತ್‌ (42) ತಮ್ಮ ಮನೆಯಲ್ಲಿ ಕಳೆದ ವರ್ಷದ ಫೆಬ್ರುವರಿಯಲ್ಲಿ ಈ ಕೃತ್ಯ ಎಸಗಿದ ಆರೋಪ ಎದುರಿಸುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !