ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

194 ಕೆ.ಜಿ ಹೆರಾಯಿನ್, ಪಾಕ್‌ನ ಆರು ಮಂದಿ ಬಂಧನ

Last Updated 21 ಮೇ 2019, 17:40 IST
ಅಕ್ಷರ ಗಾತ್ರ

ಅಹಮದಾಬಾದ್‌: ಆಳ ಸಮುದ್ರದಲ್ಲಿ ಭಾರತೀಯ ಕರಾವಳಿ ಕಾವಲುಪಡೆ ನಡೆಸಿದ ಕಾರ್ಯಾಚರಣೆಯಲ್ಲಿ ಪಾಕಿಸ್ತಾನ ಮೂಲದ ಆರು ಜನರನ್ನು ಬಂಧಿಸಲಾಗಿದ್ದು, ಮೀನುಗಾರಿಕಾ ಬೋಟ್‌ನಲ್ಲಿದ್ದ 194 ಕೆ.ಜಿ ಹೆರಾಯಿನ್‌ ವಶಪಡಿಕೊಳ್ಳಲಾಗಿದೆ.

ಕಳ್ಳಸಾಗಣೆ ನಿಗ್ರಹ ಪಡೆಯು ಅಂತರರಾಷ್ಟ್ರೀಯ ಜಲ ಗಡಿ ಇರುವ ಕಚ್‌ ಪ್ರದೇಶದಲ್ಲಿ ಈ ಕಾರ್ಯಾಚರಣೆ ನಡೆಸಿದೆ.

ಬೋಟ್‌ನಲ್ಲಿದ್ದ ಆರು ಜನರು ಪಾಕ್‌ ಮೂಲದವರು. ಎಲ್ಲರನ್ನೂ ವಶಪಡಿಸಿಕೊಳ್ಳಲಾಗಿದೆ. ಕಳೆದ ಒಂದು ವರ್ಷದಲ್ಲಿ ಮೂರನೇ ಬಾರಿ ಬೃಹತ್‌ ಪ್ರಮಾಣದಲ್ಲಿ ಹೆರಾಯಿನ್‌ ವಶಪಡಿಸಿಕೊಳ್ಳಲಾಗಿದೆ.

‘ಮೀನುಗಾರಿಕಾ ದೋಣಿಯೊಂದು ಬೃಹತ್ ಪ್ರಮಾಣದ ಹೆರಾಯಿನ್‌ ಸಾಗಿಸುತ್ತಿದೆ ಎಂದು ಎರಡು ದಿನಗಳ ಹಿಂದೆ ಕೇಂದ್ರ ರೆವೆನ್ಯೂ ಇಲಾಖೆಯ ಗುಪ್ತಚರ ವಿಭಾಗವು (ಡಿಆರ್‌ಐ) ರಾಷ್ಟ್ರೀಯ ತಾಂತ್ರಿಕ ಸಂಶೋಧನಾ ಸಂಸ್ಥೆಗೆ (ಎನ್‌ಆರ್‌ಟಿಒ) ನೀಡಿದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿತ್ತು ಎಂದು ಕರಾವಳಿ ಕಾವಲು ಪಡೆಯ ಅಧಿಕಾರಿಗಳು ತಿಳಿಸಿದ್ದಾರೆ.

ತಾನು ಹೊತ್ತುತಂದಿದ್ದ ಸರಕು ತಲುಪಿಸಲು ಅಂತರರಾಷ್ಟ್ರೀಯ ಜಲಗಡಿಯಲ್ಲಿ ಈ ಬೋಟ್‌ ಕಾಯುತ್ತಿತ್ತು. ಮೇ 20ರಂದು ಮಾಹಿತಿ ಬಂದ ತಕ್ಷಣವೇ ಅತಿವೇಗದಲ್ಲಿ ಸಾಗುವ ಎರಡು ಬೋಟ್‌, ವಿಮಾನ ಜತೆ ಶೋಧ ನಡೆಸಲಾಯಿತು ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT