ಗುರುವಾರ , ಜುಲೈ 29, 2021
21 °C

ಮಹಾವೀರಚಕ್ರ ವಿಜೇತ ಸೇನಾಧಿಕಾರಿ ಲೆಫ್ಟಿನೆಂಟ್‌ ಜನರಲ್‌ ವೋಹ್ರಾ ಕೊರೊನಾದಿಂದ ಸಾವು

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಮಹಾವೀರ ಚಕ್ರ ‍ಪ್ರಶಸ್ತಿ ವಿಜೇತ ನಿವೃತ್ತ ಲೆಫ್ಟಿನೆಂಟ್‌ ಜನರಲ್ ರಾಜ್‌‌ ಮೋಹನ್‌ ವೋಹ್ರಾ (88) ಅವರು ಕೋವಿಡ್‌–19 ನಿಂದ ಮೃತಪಟ್ಟಿದ್ದಾರೆ. 

ಶಿಮ್ಲಾ ಮೂಲದ ಅವರು 1932ರಲ್ಲಿ ಜನಿಸಿದ್ದರು. ‘ಹೃದಯ ಸಂಬಂಧಿ ಚಿಕಿತ್ಸೆಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ತಪಾಸಣೆ ನಡೆಸಿದಾಗ ಕೊರೊನಾ ಸೋಂಕು ತಗುಲಿರುವುದು‌ ದೃಢಪಟ್ಟಿತ್ತು. ಜೂನ್‌ 14 ರಂದು ಅವರು ಸಾವನ್ನಪ್ಪಿದ್ದಾರೆ. ಅಂದೇ ಮೃತರ ಅಂತ್ಯಕ್ರಿಯೆ ನಡೆಸಲಾಯಿತು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

1971ರಲ್ಲಿ ಭಾರತ– ಪಾಕಿಸ್ತಾನ ನಡುವಿನ ಯುದ್ಧದಲ್ಲಿ ಅಪ್ರತಿಮ ಶೌರ್ಯ ಮೆರೆದ ಹಿನ್ನೆಲೆಯಲ್ಲಿ ವೋಹ್ರಾ ಅವರಿಗೆ 1972ರಲ್ಲಿ ಮಹಾವೀರ ಚಕ್ರ ‍ಪ್ರಶಸ್ತಿ ನೀಡಲಾಗಿತ್ತು. 

ಸೇನೆಯ ಪೂರ್ವ ಕಮಾಂಡ್‌ನ ಜನರಲ್‌ ಕಮಾಂಡಿಂಗ್‌ ಆಫೀಸರ್‌ ಆಗಿದ್ದರು. ಅಲ್ಲದೆ, ಶಸ್ತ್ರಸಜ್ಜಿತ ಸೇನಾ ವಿಭಾಗದ ಮುಖ್ಯ ಕಮಾಂಡಿಂಗ್‌ ಅಧಿಕಾರಿಯೂ ಆಗಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು