ಸೈನಿಕರ ವಸ್ತುಗಳನ್ನೇ ಕದ್ದ ಚಾಲಾಕಿ ಕಳ್ಳರು

7
ದೆಹಲಿ ರೈಲು ನಿಲ್ದಾಣದಲ್ಲಿ ಪ್ರಕರಣ

ಸೈನಿಕರ ವಸ್ತುಗಳನ್ನೇ ಕದ್ದ ಚಾಲಾಕಿ ಕಳ್ಳರು

Published:
Updated:

ನವದೆಹಲಿ: ಇಬ್ಬರು ಸೈನಿಕರ ಪರ್ಸ್‌, ಮೊಬೈಲ್‌, ಐಡಿ ಕಾರ್ಡ್‌ ಹಾಗೂ ಬಟ್ಟೆಗಳಿದ್ದ ಸೂಟ್‌ಕೇಸ್‌ಗಳನ್ನೇ ಕಳವು ಮಾಡಿರುವ ಘಟನೆ ದೆಹಲಿ ರೈಲು ನಿಲ್ದಾಣದಲ್ಲಿ ನಡೆದಿದೆ ಎಂದು ರೈಲ್ವೆ ಇಲಾಖೆಯ ಮೂಲಗಳು ತಿಳಿಸಿವೆ.

ದೆಹಲಿ ರೈಲು ನಿಲ್ದಾಣದ ವಿಶ್ರಾಂತಿ ಗೃಹದಲ್ಲಿ ಸೈನಿಕರು ಮಲಗಿದ್ದಾಗ ಮುಂಜಾನೆ 4 ಗಂಟೆ ವೇಳೆ ಕಳ್ಳರು ಈ ಕೃತ್ಯವೆಸಗಿದ್ದಾರೆ. ರೈಲ್ವೇ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಸ್ತುಗಳನ್ನು ಕಳೆದುಕೊಂಡ ಇಬ್ಬರಲ್ಲಿ ಒಬ್ಬ ಸೈನಿಕ ಸುಧಾಕರ್‌ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ‘ನಮ್ಮ ಎಚ್ಚರದಲ್ಲಿ ನಾವಿದ್ದೆವು. ಆದರೆ, ಇದು ವಿಶ್ರಾಂತಿ ಗೃಹವಾಗಿರುವುದರಿಂದ ಭದ್ರತೆ ಇರುತ್ತದೆ ಎಂದು ಭಾವಿಸಿ ಎಚ್ಚರ ತಪ್ಪಿದೆವು’ ಎಂದು ಹೇಳಿದ್ದಾರೆ.

ಪ್ರಕರಣ ಸಂಬಂಧ ದೆಹಲಿ ರೈಲ್ವೇ ವಿಭಾಗ ತನಿಖೆಗೆ ಆದೇಶಿಸಿದೆ.

ಬರಹ ಇಷ್ಟವಾಯಿತೆ?

 • 4

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !