ವಾಯುಪಡೆ ಆನ್‌ಲೈನ್‌ ಪರೀಕ್ಷೆಗೆ ಕನ್ನ

7

ವಾಯುಪಡೆ ಆನ್‌ಲೈನ್‌ ಪರೀಕ್ಷೆಗೆ ಕನ್ನ

Published:
Updated:

ರೋಹ್ಟಕ್‌: ಭಾರತೀಯ ವಾಯುಪಡೆಯ ಆನ್‌ಲೈನ್‌ ಪರೀಕ್ಷಾ ವ್ಯವಸ್ಥೆಗೆ ಕನ್ನ ಹಾಕಿದ ಇಬ್ಬರನ್ನು ಇಲ್ಲಿ ಬಂಧಿಸಲಾಗಿದೆ.

ನಾನ್‌–ಕಮಿಷನ್ಡ್‌ ಅಧಿಕಾರಿಗಳ ನೇಮಕಾತಿಗಾಗಿ ಸೆ. 13ರಿಂದ 16ರವರೆಗೆ ಈ ಪರೀಕ್ಷೆ ನಡೆಸಲಾಗುತ್ತಿತ್ತು. ಹಿಸಾರ್‌–ರೋಹ್ಟಕ್‌ ರಸ್ತೆಯಲ್ಲಿನ ಪರೀಕ್ಷಾ ಕೇಂದ್ರದ ಪಕ್ಕದ ಖಾಸಗಿ ಆಸ್ಪತ್ರೆಯಲ್ಲಿ ಪರ್ಯಾಯ ವ್ಯವಸ್ಥೆ ರೂಪಿಸಿಕೊಂಡಿದ್ದ ಆರೋಪಿಗಳು ಪರೀಕ್ಷೆಗೆ ಬಳಸಲಾದ ಕಂಪ್ಯೂಟರ್‌ಗಳ ರಿಮೋಟ್‌ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ತಜ್ಞರ ನೆರವಿನಿಂದ ಆರೋಪಿಗಳು ಪ್ರಶ್ನೆಗಳಿಗೆ ಉತ್ತರ ನೀಡುತ್ತಿದ್ದರು. ಈ ವೇಳೆ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರದಲ್ಲಿ ಮೌನದಿಂದ ಕುಳಿತುಕೊಳ್ಳುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !