ಬುಧವಾರ, ಸೆಪ್ಟೆಂಬರ್ 18, 2019
23 °C
ಭಿವಂಡಿ

ಮಹಾರಾಷ್ಟ್ರ: ಕಟ್ಟಡ ಕುಸಿದು ಇಬ್ಬರು ಸಾವು, ಅವಶೇಷಗಳ ಅಡಿ ಸಿಲುಕಿರುವ ಜನ

Published:
Updated:

ಭಿವಂಡಿ: ನಾಲ್ಕು ಅಂತಸ್ತಿನ ಕಟ್ಟಡ ಕುಸಿದು ಕನಿಷ್ಠ ಇಬ್ಬರು ಸಾವಿಗೀಡಾಗಿರುವ ಘಟನೆ ಶನಿವಾರ ಬೆಳಿಗ್ಗೆ ಮಹಾರಾಷ್ಟ್ರದ ಭಿವಂಡಿಯಲ್ಲಿ ನಡೆದಿದೆ. 

ಮುಂಚಿತವಾಗಿಯೇ ಸ್ಥಳೀಯರನ್ನು ಸ್ಥಳಾಂತರಿಸಿದ್ದರೂ ಕಟ್ಟಡದ ಅವಶೇಷಗಳ ಅಡಿ ಅನೇಕರು ಸಿಲುಕಿದ್ದಾರೆ. ಈಗಾಗಲೇ ನಾಲ್ಕು ಮಂದಿಯನ್ನು ರಕ್ಷಿಸಲಾಗಿದೆ. ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದು, ಐದು ಜನ ಗಾಯಗೊಂಡಿದ್ದಾರೆ. ಈ ಬಗ್ಗೆ ಭಿವಂಡಿ ಮುನ್ಸಿಪಲ್‌ ಕಾರ್ಪೊರೇಷನ್‌ ಆಯುಕ್ತ ಅಶೋಕ್‌ ರಣಖಂಬ್‌ ಮಾಹಿತಿ ನೀಡಿದ್ದಾರೆ. 

’ಶಿಥಿಲಗೊಂಡ ಸ್ಥಿತಿಯಲ್ಲಿದ್ದ ಕಟ್ಟಡವು ಕುಸಿಯಬಹುದೆಂಬ ಮಾಹಿತಿ ದೊರೆಯಿತು. ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಬಂದು ಜನರನ್ನು ಕಟ್ಟಡದಿಂದ ಸ್ಥಳಾಂತರಿಸಿದೆವು. ಜನರು ಕಟ್ಟಡದಿಂದ ಹೊರಬಂದರು, ಆದರೆ ಕೆಲವು ಮಂದಿ ತಮ್ಮ ಲಗೇಜ್‌ ತೆಗೆದುಕೊಳ್ಳಲು ಒಳಹೊಕ್ಕಿದರು. ಇದೇ ಸಮಯದಲ್ಲಿ ಕಟ್ಟಡ ಕುಸಿದಿದೆ. 8 ವರ್ಷ ಹಳೆಯ ಕಟ್ಟಡವಾಗಿದ್ದು, ಅಕ್ರಮವಾಗಿ ನಿರ್ಮಾಣ ಮಾಡಲಾಗಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತದೆ‘ ಎಂದು ಆಯುಕ್ತರು ಪ್ರತಿಕ್ರಿಯಿಸಿದ್ದಾರೆ. 

 ಕನಿಷ್ಠ 10 ಮಂದಿ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದು, ಎನ್‌ಡಿಆರ್‌ಎಫ್‌ ರಕ್ಷಣಾ ಕಾರ್ಯ ನಡೆಸುತ್ತಿದೆ. 

Post Comments (+)