ಪಾಕ್‌ ಜೈಲಿನಲ್ಲಿದ್ದ ಗುಜರಾತ್‌ನ ಇಬ್ಬರು ಮೀನುಗಾರರ ಬಿಡುಗಡೆ

7

ಪಾಕ್‌ ಜೈಲಿನಲ್ಲಿದ್ದ ಗುಜರಾತ್‌ನ ಇಬ್ಬರು ಮೀನುಗಾರರ ಬಿಡುಗಡೆ

Published:
Updated:

ವಡೋದರ: ಪಾಕಿಸ್ತಾನದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿದ್ದ ಗುಜರಾತ್‌ನ ಇಬ್ಬರು ಮೀನುಗಾರರನ್ನು ಅಲ್ಲಿನ ಸರ್ಕಾರ ಬಿಡುಗಡೆ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗುಜರಾತ್‌ನ ಗಿರ್‌ ಸೋಮನಾಥ್‌ ಜಿಲ್ಲೆಯ ಪಲ್ದಿ ನಿವಾಸಿ ದಾನಾಭಾಯ್‌ ಅರ್ಜನ್‌ಭಾಯ್‌ ಚೌಹಾಣ್‌ ಮತ್ತು ಸೌರಾಷ್ಟ್ರದ ಕಂಜೋತರ್‌ನ ರಾಮಭಾಯ್‌ ಗೋಹಿಲ್‌ ಅವರನ್ನು  ಶುಕ್ರವಾರ ಬಿಡುಗಡೆ ಮಾಡಲಾಗಿದೆ ಎಂದು ಗುಜರಾತ್‌ನ ಮೀನುಗಾರಿಕಾ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

‘ಪಾಕಿಸ್ತಾನದ ರೇಂಜರ್‌ಗಳು ವಾಘಾ ಗಡಿಯಲ್ಲಿ ಇಬ್ಬರು ಮೀನುಗಾರರರನ್ನು ಗಡಿಭದ್ರತಾ ಪಡೆಯ ಯೋಧರಿಗೊಪ್ಪಿಸಿದ್ದಾರೆ. ಅನಂತರ ಅಮೃತಸರ ಜಿಲ್ಲಾಧಿಕಾರಿ ಅವರನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ’ ಎಂದು ಹೇಳಿದ್ದಾರೆ.

‘ಚೌಹಾನ್‌ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಗೋಹಿಲ್‌ ಜೈಲಿನಲ್ಲಿರುವಾಗಲೇ ಪಾರ್ಶ್ವವಾಯುವಿಗೆ ತುತ್ತಾಗಿದ್ದರು’ ಎಂದೂ ತಿಳಿಸಿದ್ದಾರೆ.

ಪಾಕಿಸ್ತಾನದ ಸಮುದ್ರ ಪ್ರದೇಶವನ್ನು ಪ್ರವೇಶಿಸಿದ ಆರೋಪದಲ್ಲಿ ಗೋಹಿಲ್‌ರನ್ನು  2017ರಲ್ಲಿ ಮಾರ್ಚ್4 ರಂದು ಹಾಗೂ ಚೌಹಾನ್‌ ಅವರನ್ನು ಮೇ 3ರಂದು ಪಾಕಿಸ್ತಾನದ ಅಧಿಕಾರಿಗಳು ಬಂಧಿಸಿದ್ದರು. ಇವರು ಕರಾಚಿ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದರು.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !