ಕಾಶ್ಮೀರ: ಇಬ್ಬರು ಹಿಜ್ಬುಲ್‌ ಉಗ್ರರ ಹತ್ಯೆ

7

ಕಾಶ್ಮೀರ: ಇಬ್ಬರು ಹಿಜ್ಬುಲ್‌ ಉಗ್ರರ ಹತ್ಯೆ

Published:
Updated:

ಶ್ರೀನಗರ: ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯ ಸಾತ್‌ಗುಂಡ್‌ನಲ್ಲಿ ಭದ್ರತಾಪಡೆಗಳು ಗುರುವಾರ ನಡೆಸಿದ ಎನ್‌ಕೌಂಟರ್‌ಗೆ ಕಮಾಂಡರ್‌ ಮನನ್‌ ಬಷೀರ್‌ ವಾನಿ ಸೇರಿ ಇಬ್ಬರು ಹಿಜ್ಬುಲ್‌ ಮುಜಾಹಿದೀನ್‌ ಉಗ್ರರು ಬಲಿಯಾಗಿದ್ದಾರೆ.

ಅಲಿಗಡ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ (ಎಎಮ್‌ಯು) ಪಿಎಚ್‌.ಡಿ ಸಂಶೋಧನಾ ವಿದ್ಯಾರ್ಥಿಯಾಗಿದ್ದ 27 ವರ್ಷದ ಮನನ್‌ ಈಚೆಗೆ ಉಗ್ರ ಸಂಘಟನೆಗೆ ಸೇರ್ಪಡೆಗೊಂಡಿದ್ದ.

‘ಭದ್ರತಾ ಪಡೆಗಳು ಉಗ್ರರನ್ನು ಸುತ್ತುವರಿದಾಗ ಗುಂಡಿನ ಚಕಮಕಿ ನಡೆದಿದೆ. ಈ ವೇಳೆ ಉಗ್ರರು ಹತರಾಗಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಉಗ್ರರು ಅವಿತಿದ್ದ ಪ್ರದೇಶವನ್ನು ಭದ್ರತಾ ಪಡೆ ಯೋಧರು ಸುತ್ತುವರಿದು, ಶರಣಾಗಲು ಸೂಚಿಸಿದ್ದಾರೆ. ಈ ವೇಳೆ ಉಗ್ರರು ಗುಂಡಿನ ದಾಳಿ ಆರಂಭಿಸಿದ್ದಾರೆ. ಪ್ರತಿದಾಳಿ ನಡೆಸಿದಾಗ ಹತರಾಗಿದ್ದಾರೆ’ ಎಂದು ಪೊಲೀಸರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !