ಶನಿವಾರ, ಡಿಸೆಂಬರ್ 14, 2019
24 °C

ಮೇಘಾಲಯ ಚರ್ಚ್‌ನಲ್ಲಿ ಬೆಂಕಿ ಅವಘಡ: ವೃದ್ಧ ದಂಪತಿ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೇಘಾಲಯ: ಶತಮಾನದಷ್ಟು ಹಳೆಯದಾದ ಚರ್ಚ್‌‌ನಲ್ಲಿ ಸಂಭವಿಸಿದ ಅಗ್ನಿ ಆಕಸ್ಮಿಕದಲ್ಲಿ ಇಬ್ಬರು ಮೃತಪಟ್ಟು ಹಲವು ಮಂದಿ ಗಾಯಗೊಂಡಿರುವ ಘಟನೆ ಭಾನುವಾರ ಬೆಳಗ್ಗೆ ನಡೆದಿದೆ.

ಶಿಲ್ಲಾಂಗ್‌‌ನಲ್ಲಿರುವ ಚರ್ಚ್ ಆಫ್ ಗಾಡ್ ಮಂದಿರದಲ್ಲಿ ದುರಸ್ಥಿ ಕಾರ್ಯ ನಡೆಯುತ್ತಿದ್ದು, ವಿದ್ಯುತ್ ತಂತಿಯಲ್ಲಿ ಬೆಂಕಿ ಕಾಣಿಸಿಕೊಂಡು ಈ ದುರಂತ ಸಂಭವಿಸಿರಬಹುದು ಎಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ. 1902ರಲ್ಲಿ ಸ್ಥಾಪಿಸಲಾಗಿರುವ ಈ ಚರ್ಚ್‌ನಲ್ಲಿ ಭಾನುವಾರ ಬೆಳಗ್ಗೆ ಪ್ರಾರ್ಥನೆ ಸಲ್ಲಿಸಲು ಜನರು ಆಗಮಿಸಿದ್ದರು ಎನ್ನಲಾಗಿದೆ.

ಮೃತಪಟ್ಟ ಇಬ್ಬರು ವಯೋವೃದ್ದರಾಗಿದ್ದು, ಚರ್ಚ್‌‌ಗೆ ಸಮೀಪದಲ್ಲಿಯೇ ಇವರ ಮನೆ ಇದೆ ಎನ್ನಲಾಗಿದೆ. ಉಸಿರುಗಟ್ಟಿ ಇಬ್ಬರು ಮೃತಪಟ್ಟಿದ್ದು ಯಾವುದೇ ವಿಧ್ವಂಸಕ ಕೃತ್ಯಗಳಿಂದ ಈ ಘಟನೆ ಸಂಭವಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಂಕಿ ಕಾಣಿಸಿಕೊಂಡಿದ್ದು ಹೇಗೆ ಎಂಬುದರ ಕುರಿತು ತನಿಖೆ ನಡೆಯುತ್ತಿದೆ. ವಿದ್ಯುತ್ ತಂತಿ ಹಾಗೂ ಮರದ ನೆಲಹಾಸು ಸೇರಿದಂತೆ ಚರ್ಚ್‌‌ನಲ್ಲಿ ದುರಸ್ಥಿ ಕಾರ್ಯ ನಡೆಯುತ್ತಿರುವುದರಿಂದ ವಿದ್ಯುತ್ ತಂತಿಯಿಂದ ಬೆಂಕಿ ಕಾಣಿಸಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಚರ್ಚ್ ಸಂಪೂರ್ಣ ಭದ್ರತೆಯಿಂದ ಕೂಡಿದೆ. ಕಾವಲುಗಾರರು ಕಟ್ಟಡದ ಸಮೀಪದಲ್ಲಿಯೇ ಇದ್ದಾರೆ. ಹಾಗಾಗಿ ಯಾವುದೇ ವಿಧ್ವಂಸಕ ಕೃತ್ಯ ನಡೆದಿರುವ ಸಾಧ್ಯತೆ ಇಲ್ಲ ಎಂದು ಈಸ್ಟ್ ಕಾಶಿ ಹಿಲ್ಸ್‌‌ನ ಎಸ್ ಪಿ ಸಿ.ಎ.ಲಿಂಗ್ವಾ ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು