ಗುರುವಾರ , ಸೆಪ್ಟೆಂಬರ್ 19, 2019
29 °C

ಹಿಮಾಚಲ ಪ್ರದೇಶ: ಮಧ್ಯಮ ತೀವ್ರತೆಯ ಭೂಕಂಪ

Published:
Updated:
Prajavani

ನವದೆಹಲಿ: ಹಿಮಾಚಲ ಪ್ರದೇಶ– ಜಮ್ಮು ಮತ್ತು ಕಾಶ್ಮೀರ ಗಡಿ ಬಳಿಯ ಚಂಬಾ ಪ್ರದೇಶದಲ್ಲಿ ಸೋಮವಾರ ಎರಡು ಬಾರಿ ಮಧ್ಯಮ ತೀವ್ರತೆಯ ಭೂಕಂಪನವಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ.

ರಿಕ್ಟರ್‌ ಮಾಪಕದಲ್ಲಿ 5.0 ತೀವ್ರತೆಯ ಭೂಕಂಪನ ಮಧ್ಯಾಹ್ನ 12.10 ಕ್ಕೆ  ಹಾಗೂ 2.7 ತೀವ್ರತೆಯ ಭೂಕಂಪನ 12.57ಕ್ಕೆ ಸಂಭವಿಸಿದೆ. ಎರಡು ಭೂಕಂಪನದ ಕೇಂದ್ರ ಬಿಂದುವನ್ನು ಭೂಮಿಯಿಂದ 5 ಕಿ.ಮೀ ಆಳದಲ್ಲಿ ಗುರುತಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Post Comments (+)