ಇಬ್ಬರು ಶಂಕಿತ ಉಗ್ರರ ಬಂಧಿಸಿದ ದೆಹಲಿ ವಿಶೇಷ ಪೊಲೀಸ್ ಪಡೆ

7

ಇಬ್ಬರು ಶಂಕಿತ ಉಗ್ರರ ಬಂಧಿಸಿದ ದೆಹಲಿ ವಿಶೇಷ ಪೊಲೀಸ್ ಪಡೆ

Published:
Updated:

ನವದೆಹಲಿ: ಇಸ್ಲಾಮಿಕ್‌ ಸ್ಟೇಟ್‌ ಇನ್‌ ಜಮ್ಮು ಕಾಶ್ಮೀರ (ಐಎಸ್‌ಜೆಕೆ) ಭಯೋತ್ಪಾದಕ ಸಂಘಟನೆಯ ಇಬ್ಬರು ಉಗ್ರರನ್ನು  ದೆಹಲಿ ವಿಶೇಷ ಪಡೆ ಇಲ್ಲಿನ ಕೆಂಪು ಕೋಟೆಯ ಬಳಿ ಬಂಧಿಸಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. 

ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿದ ಪೊಲೀಸರು,  ಬಂಧಿತ ಇಬ್ಬರು ಶಂಕಿತ ಉಗ್ರರು  ಪರ್ವೇಜ್‌ ರಷೀದ್‌ ಮತ್ತು ಜಮ್‌ಶಿದ್‌ ಜಾಹೂರ್‌ ಕಾಶ್ಮೀರದ ಶೋಪಿಯಾನ್‌ ನಿವಾಸಿಗಳು ಎಂದು ಮೂಲಗಳಿಂದ ತಿಳಿದು ಬಂದಿದೆ. ಈ ಹಿಂದೆ ನಡೆದ ಎನ್‌ಕೌಂಟರ್‌ನಲ್ಲಿ ಇವರ ಸಂಬಂಧಿಕರೊಬ್ಬರು ಹತ್ಯೆಯಾಗಿದ್ದರು ಎಂದು ತಿಳಿಸಿದರು. 

ಸಮಾಜ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು, ಕಾನೂನು ಬಾಹಿರ ಚಟುವಟಿಕೆಗಳ ಕಾಯ್ದೆ ಅಡಿಯಲ್ಲಿ ಬಂಧಿಸಿದ್ದಾರೆ  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !