ಕೊಲ್ಕತ್ತಾದ 20 ಸೇತುವೆಗಳು ಸುರಕ್ಷಿತವಲ್ಲ: ಮಮತಾ ಬ್ಯಾನರ್ಜಿ

7

ಕೊಲ್ಕತ್ತಾದ 20 ಸೇತುವೆಗಳು ಸುರಕ್ಷಿತವಲ್ಲ: ಮಮತಾ ಬ್ಯಾನರ್ಜಿ

Published:
Updated:

ಕೊಲ್ಕತ್ತಾ: ‘ಕೋಲ್ಕತ್ತಾ ಹಾಗೂ ಸುತ್ತಮುತ್ತಲ ನಗರಗಳಲ್ಲಿರುವ 20 ಸೇತುವೆಗಳು ಶಿಥಿಲಾವಸ್ಥೆ ತಲುಪಿದ್ದು, ಯಾವಾಗ ಬೇಕಾದರೂ ಕುಸಿಯಬಹುದು’ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಿಳಿಸಿದರು.

‘ತಜ್ಞರ ಅಭಿಪ್ರಾಯದಂತೆ ಆ ಎಲ್ಲಾ 20 ಸೇತುವೆಗಳನ್ನು ಪರಿಶೀಲಿಸಿ, ಶೀಘ್ರ ದುರಸ್ತಿಗೊಳಿಸಲು ಕ್ರಮಕೈಗೊಳ್ಳಲಾಗುವುದು’ ಎಂದು ಹೇಳಿದರು. ಅವರು ಈ ಹೇಳಿಕೆ ನೀಡುವ ಕೆಲ ಗಂಟೆಗಳ ಮುಂಚೆ ಉತ್ತರ ಬಂಗಾಳದ ಸಿಲಿಗುರಿಯಲ್ಲಿನ ಹಳೆಯ ಸೇತುವೆಯೊಂದು ಕುಸಿದಿದೆ. ಒಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ. 

ಮಾಗಾಂಜ್‌ ಮತ್ತು ಫನ್ಸಿದೇವ ಪ್ರದೇಶಗಳಿಗೆ ಈ ಸೇತುವೆ ಸಂಪರ್ಕ ಕಲ್ಪಿಸುತ್ತದೆ. ‘ಈ ಸೇತುವೆಯ ಮೇಲೆ ಭಾರಿ ವಾಹನಗಳ ಪ್ರವೇಶವನ್ನು ನಿಷೇಧಿಸಲಾಗಿದೆ. ಆದರೆ, ಈಶಾನ್ಯ ರಾಜ್ಯಗಳಿಗೆ ಹೋಗುವ ಲಾರಿಗಳು ಈ ಸೇತುವೆಯ ಮೂಲಕವೇ ಹೋಗುತ್ತವೆ. ಅದರ ಪರಿಣಾಮದಿಂದಲೇ ಸೇತುವೆ ಕುಸಿದಿದೆ’ ಎಂದು ಉತ್ತರ ಬಂಗಾಳದ ಅಭಿವೃದ್ಧಿ ಸಚಿವ ರವೀಂದ್ರನಾಥ್‌ ಘೋಷ್‌ ಹೇಳಿದರು.

‘ಅನೇಕ ವರ್ಷಗಳ ಹಿಂದೆ ಈ ಸೇತುವೆ ನಿರ್ಮಿಸಲಾಗಿದ್ದು, ಅದಕ್ಕೆ ಸಂಬಂಧಿಸಿದ ಯಾವೊಂದು ದಾಖಲೆಗಳು ನಮ್ಮ ಬಳಿ ಇಲ್ಲ. ಲೋಕೋಪಯೋಗಿ ಇಲಾಖೆ ವರದಿ ನೀಡಿದ ನಂತರ ದುರಸ್ತಿ ಕೆಲಸ ಕೈಗೊಳ್ಳುತ್ತೇವೆ’ ಎಂದರು.

ಮೂರು ದಿನಗಳ ಅಂತರದಲ್ಲಿ ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಎರಡನೇ ಪ್ರಕರಣ ಇದಾಗಿದೆ. ಸೆಪ್ಟೆಂಬರ್ 4ರಂದು ದಕ್ಷಿಣ ಕೊಲ್ಕತ್ತಾದ ಜನನಿಬಿಡ ಪ್ರದೇಶವಾದ ಅಲಿಪೊರದಲ್ಲಿ ಸೇತುವೆ ಕುಸಿದು ಮೂವರು ಮೃತಪಟ್ಟಿದ್ದು, 24 ಮಂದಿ ಗಾಯಗೊಂಡಿದ್ದರು.

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !