ಕರುಣಾನಿಧಿ ಅನಾರೋಗ್ಯದ ಆಘಾತದಿಂದ 21 ಕಾರ್ಯಕರ್ತರು ಸಾವಿಗೀಡಾಗಿದ್ದಾರೆ: ಸ್ಟಾಲಿನ್

7

ಕರುಣಾನಿಧಿ ಅನಾರೋಗ್ಯದ ಆಘಾತದಿಂದ 21 ಕಾರ್ಯಕರ್ತರು ಸಾವಿಗೀಡಾಗಿದ್ದಾರೆ: ಸ್ಟಾಲಿನ್

Published:
Updated:

ಚೆನ್ನೈ: ಪಕ್ಷದ ಮುಖ್ಯಸ್ಥ ಕರುಣಾನಿಧಿ ಅವರ ಅನಾರೋಗ್ಯ ವಿಚಾರದ ಆಘಾತದಿಂದಾಗಿ 21 ಕಾರ್ಯಕರ್ತರು ಮೃತಪಟ್ಟಿದ್ದಾರೆ ಎಂದು ಡಿಎಂಕೆ ಕಾರ್ಯಾಧ್ಯಕ್ಷ ಎಂ.ಕೆ. ಸ್ಟಾಲಿನ್‌ ಹೇಳಿದ್ದಾರೆ.

ಬುಧವಾರ ರಾತ್ರಿ ಅವರ ಆರೋಗ್ಯ ವಿಚಾರಿಸಿಕೊಂಡು ಆಸ್ಪತ್ರೆಯಿಂದ ಹೊರಬಂದ ಸ್ಟಾಲಿನ್‌, ‘ವೈದ್ಯರ ಒಂದು ತಂಡ ನಿರಂತರವಾಗಿ ನಿಗಾ ವಹಿಸಿದ್ದು, ಆರೋಗ್ಯ ಸಹಜ ಸ್ಥಿತಿಗೆ ಮರಳುತ್ತಿದೆ’ ಎಂದಿದ್ದಾರೆ.

ಇಲ್ಲಿನ ಖಾಸಗಿ ಆಸ್ಪತ್ರೆಗೆ ಕರುಣಾನಿಧಿ ಅವರನ್ನು ದಾಖಲಿಸಲಾಗಿದ್ದು, ಸತತ ಆರನೇ ದಿನವೂ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿದಿದೆ.

‘ಕರುಣಾನಿಧಿ ಅನಾರೋಗ್ಯದ ಸುದ್ದಿಯನ್ನು ಅರಗಿಸಿಕೊಳ್ಳಲಾಗದೆ ಪಕ್ಷದ 21 ಕಾರ್ಯಕರ್ತರು ಸಾವಿಗೀಡಾಗಿರುವುದು ಬಹಳ ನೋವು ತಂದಿದೆ. ಮುಖ್ಯಮಂತ್ರಿಗಳ ಅನಾರೋಗ್ಯದ ವಿಚಾರವಾಗಿ ಜನರು ಯಾವುದೇ ರೀತಿಯ ದುಡುಕಿನ ತೀರ್ಮಾನ ಕೈಗೊಳ್ಳಬಾರದು’ ಎಂದು ಮನವಿ ಮಾಡಿದ್ದಾರೆ.

ಕರುಣಾನಿಧಿ ಅವರಿಗೆ ಸದ್ಯ 94 ವರ್ಷ ವಯಸ್ಸಾಗಿದೆ. ಅವರ ಉತ್ತರಾಧಿಕಾರಿಯಾಗಲಿರುವ ಮಗ ಸ್ಟಾಲಿನ್‌ ’ಪಕ್ಷ ಒಬ್ಬ ಕಾರ್ಯಕರ್ತರ ಸಾವನ್ನೂ ಸಹಿಸಿಕೊಳ್ಳಲಾಗದು’ ಎಂದೂ ಹೇಳಿಕೊಂಡಿದ್ದಾರೆ. 

ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಮಂಗಳವಾರ ಆಸ್ಪತ್ರೆಗೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿದ್ದರು.

ಇದನ್ನೂ ಓದಿ

'ತಲೈವಾ ಬೇಕು', ಆಸ್ಪತ್ರೆ ಮುಂದೆ ಹಠ ಹಿಡಿದು ನಿಂತ ಕರುಣಾನಿಧಿ ಅಭಿಮಾನಿಗಳು

ಬರಹ ಇಷ್ಟವಾಯಿತೆ?

 • 0

  Happy
 • 4

  Amused
 • 2

  Sad
 • 1

  Frustrated
 • 9

  Angry

Comments:

0 comments

Write the first review for this !