ಶುಕ್ರವಾರ, ಡಿಸೆಂಬರ್ 13, 2019
24 °C

ತಾಯಿ, ತಂಗಿ, ಸೋದರನ ಪತ್ನಿಯ ಅತ್ಯಾಚಾರ ಮಾಡಿದವನನ್ನು ಕುಟುಂಬಸ್ಥರೇ ಕೊಂದರು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭೋಪಾಲ (ಮಧ್ಯಪ್ರದೇಶ): ಮಧ್ಯಪ್ರದೇಶದಲ್ಲಿ ಕುಟುಂಬಸ್ಥರೇ ಸೇರಿ 24 ವರ್ಷದ ಮದ್ಯ ವ್ಯಸನಿಯನ್ನು ಕೊಂದಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕುಟುಂಬದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. 

ಮಧ್ಯಪ್ರದೇಶದ ಡಾಟಿಯಾ ಎಂಬಲ್ಲಿ ಈ ಕೃತ್ಯ ನಡೆದಿದ್ದು, ಘಟನೆಯ ಹಿಂದಿನ ಕಾರಣ ನಾಗರಿಕ ಸಮಾಜವನ್ನು ಬೆಚ್ಚಿಬೀಳುವಂತೆ ಮಾಡಿದೆ. ತನಿಖೆ ವೇಳೆ ಕುಟುಂಬಸ್ಥರು ಹೇಳಿಕೊಂಡಿರುವ ಸಂಗತಿ ಪೊಲೀಸರನ್ನೇ ಬೆರಗಾಗಿಸಿದೆ. 

‘ನನ್ನ ಮಗ ಮದ್ಯ ವ್ಯಸನಿಯಾಗಿದ್ದ. ಕುಡಿತಕ್ಕೆ ದಾಸನಾಗಿದ್ದ ಆತ, ಮನೆಯಲ್ಲಿದ್ದ ಹೆಣ್ಣು ಮಕ್ಕಳ ಮೇಲೆ ಸತತವಾಗಿ ಅತ್ಯಾಚಾರ ಮಾಡಿದ್ದಾನೆ. ತಾಯಿ, ತಂಗಿ, ಸೋದರನ ಪತ್ನಿಯನ್ನೂ ಆತ ಮಾನಭಂಗ ಮಾಡಿದ್ದಾನೆ. ಆತನ ಕೃತ್ಯಗಳನ್ನು ಸಹಿಸಲಾಗದೇ ನಾವೆಲ್ಲ ಸೇರಿ ಅವನ ಕತ್ತು ಹಿಸುಕಿ ಕೊಂದಿದ್ದೇವೆ,’ ಎಂದು ಮೃತನ ತಂದೆ ಹೇಳಿಕೊಂಡಿದ್ದಾರೆ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು