26 ಮಂದಿ ಬಾಲಕಾರ್ಮಿಕರ ರಕ್ಷಣೆ

ಶುಕ್ರವಾರ, ಜೂಲೈ 19, 2019
22 °C

26 ಮಂದಿ ಬಾಲಕಾರ್ಮಿಕರ ರಕ್ಷಣೆ

Published:
Updated:

ರಾಯ್‌ಪುರ: ಇಲ್ಲಿನ ಆಮಾಸಿವನೀ ಪ್ರದೇಶದಲ್ಲಿರುವ ಹೆಸರಾಂತ ಬಿಸ್ಕೆಟ್‌ ಉತ್ಪಾದನಾ ಕಾರ್ಖಾನೆ ‘ಪಾರ್ಲೆ–ಜಿ’ಯಲ್ಲಿ ಕೆಲಸ ಮಾಡುತ್ತಿದ್ದ 26 ಮಂದಿ ಬಾಲ ಕಾರ್ಮಿಕರನ್ನು ಶನಿವಾರ ಸರ್ಕಾರದ ಕಾರ್ಯಪಡೆ ರಕ್ಷಿಸಿದೆ.

ಖಚಿತ ಮಾಹಿತಿ ಆಧರಿಸಿ ಶುಕ್ರವಾರ ಸಂಜೆ ದಾಳಿ ನಡೆಸಿ ಮಕ್ಕಳನ್ನು ರಕ್ಷಿಸಲಾಗಿದೆ ಎಂದು ವಿಧಾನಸಭಾ ಠಾಣೆಯ ಅಧಿಕಾರಿ ಆಶ್ವನಿ ರಾಥೋಡ್‌ ಹೇಳಿದ್ದಾರೆ.

ರಕ್ಷಿಸಲಾದ ಮಕ್ಕಳನ್ನು ಬಾಲಮಂದಿರಕ್ಕೆ ಕಳುಹಿಸಲಾಗಿದೆ. ಈ ಎಲ್ಲರೂ 13 ರಿಂದ 17ವರ್ಷ ವಯಸ್ಸಿನವರು ಎಂದು ತಿಳಿಸಿದ್ದಾರೆ. ಕಾರ್ಖಾನೆ ಆಡಳಿತದ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !