ಶನಿವಾರ, ಮಾರ್ಚ್ 28, 2020
19 °C

ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿಗೆ ಲಸಿಕೆ: 3 ಬಂಧನ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಮಹಾರಾಷ್ಟ್ರ (ಪಿಟಿಐ): ವಿಶ್ವವೆ ಕೊರೊನಾ ಸೋಂಕಿನಿಂದ ತತ್ತರಿಸಿರುವುದಲ್ಲದೆ, ಈ ಸೋಂಕಿಗೆ ಇನ್ನೂ ಚುಚ್ಚುಮದ್ದು ಕಂಡು ಹಿಡಿದಿಲ್ಲ. ಇಂತಹ ಸಮಯದಲ್ಲಿ ಈ ಸೋಂಕಿಗೆ ಲಸಿಕೆ ತಮ್ಮ ಬಳಿ ಇರುವುದಾಗಿ ಜನರಿಗೆ ಮೋಸ ಮಾಡುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಮಹಾರಾಷ್ಟ್ರದ ಜಲ್ನಾ ಜಿಲ್ಲೆಯ ರಾಧಾ ರಾಮನಾಥ ಸಾಮ್ಸೆ, ಸೀಮಾ ಕೃಷ್ಣ ಅಂಡಾಳೆ, ಸಂಗೀತ ರಾಜೇಂದ್ರ ಅವ್ಹಾದ್ ಬಂಧಿತರು.

ಇವರು ಮಹಾರಾಷ್ಟ್ರದ ಬೀಡ್ ಪ್ರದೇಶದ ಗ್ರಾಮವೊಂದರ ನಿವಾಸಿಗಳು ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳು ವೈದ್ಯರು ಮತ್ತು ಆರೋಗ್ಯ ಕ್ಷೇತ್ರದ ಕಾರ್ಯಕರ್ತರು ಎಂದು ಸುಳ್ಳು ಹೇಳಿ ಜನರನ್ನು ವಂಚಿಸುತ್ತಿದ್ದರು. ಆರೋಪಿಗಳು ಅಂಬಾಡ್ ತಹಶೀಲ್ ಪ್ರದೇಶದ ಪಿಪಲ್ ಗಾಂವ್ ಎಂಬ ಪ್ರದೇಶಕ್ಕೆ ತೆರಳಿ ಕೊರೊನಾ ವೈರಸ್ ತಡೆಗೆ ಲಸಿಕೆ ತಮ್ಮ ಬಳಿ ಇದೆ ಎಂದು ಮುಗ್ದ ಜನರನ್ನು ನಂಬಿಸುತ್ತಿದ್ದರು.

ಇವರನ್ನು ನೋಡಿದ ಕೆಲ ಗ್ರಾಮಸ್ಥರು ಸ್ಥಳೀಯ ವೈದ್ಯಾಧಿಕಾರಿ ಡಾ.ಮಹದೇವ ಮುಂಡೆ ಎಂಬುವರ ಬಳಿ ದೂರು ನೀಡಿದರು. ಕೂಡಲೆ ದಾಳಿ ನಡೆಸಿದ ಅಧಿಕಾರಿಗಳು ನಕಲಿ ಬಾಟಲಿಗಳು ಹಾಗೂ ರಾಜ್ಯ ಸರ್ಕಾರ ನೀಡಿದ್ದ ಕೆಲ ಔಷಧಗಳನ್ನು ಆರೋಪಿಗಳಿಂದ ವಶಪಡಿಸಿಕೊಂಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು