ಎನ್‌ಕೌಂಟರ್‌: ಮೂವರು ನಕ್ಸಲರ ಹತ್ಯೆ

ಬುಧವಾರ, ಏಪ್ರಿಲ್ 24, 2019
27 °C

ಎನ್‌ಕೌಂಟರ್‌: ಮೂವರು ನಕ್ಸಲರ ಹತ್ಯೆ

Published:
Updated:

ರಾಂಚಿ: ಜಾರ್ಖಂಡ್‌ನ ಗಿರಿಡಿಹ್‌ ಜಿಲ್ಲೆಯಲ್ಲಿ ಕೇಂದ್ರಿಯ ಮೀಸಲು ಪಡೆ (ಸಿಆರ್‌ಪಿಎಫ್‌) ಪೊಲೀಸರು ನಡೆಸಿದ  ಕಾರ್ಯಚರಣೆಯಲ್ಲಿ ಮೂವರು ನಕ್ಸಲರು ಬಲಿಯಾಗಿದ್ದಾರೆ. ಇದೇ ವೇಳೆ ನಕ್ಸಲರ ಗುಂಡಿನ ದಾಳಿಗೆ ಸಿಆರ್‌ಪಿಎಫ್‌ ಯೋಧರೊಬ್ಬರು ಹುತ್ಮಾತ್ಮರಾಗಿದ್ದಾರೆ.

ಇಲ್ಲಿನ  ಬೆಲ್ಬಾ ಘಾಟ್‌ ಪ್ರದೇಶದಲ್ಲಿ ಸೋಮವಾರ ಬೆಳಿಗ್ಗೆ ಯೋಧರು ಮತ್ತು ನಕ್ಸಲರ ನಡುವೆ ಗುಂಡಿನ ಚಕಮಕಿ ನಡೆಯಿತು. ಘಟನೆ ನಡೆದ ಸ್ಥಳದಿಂದ ಎಕೆ–47 ಬಂದೂಕು, ಮೂರು ನಿಯತಕಾಲಿಕೆಗಳು ಮತ್ತು ನಾಲ್ಕು ಪೈಪ್‌ ಬಾಂಬ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಮೃತ ಸಿಆರ್‌ಪಿಎಫ್‌ ಕಾನ್ಸ್‌ಸ್ಟೆಬಲ್‌ ಬಿಸ್ವಜಿತ್‌ ಚೌಹಾಣ್‌ ಅಸ್ಸಾಂನ ಉದಲ್‌ಗುಡಿ ಜಿಲ್ಲೆಯವರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !