ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ವಿರುದ್ಧ ಹೋರಾಟಕ್ಕೆ ವಾರ್ಷಿಕ ಸಂಬಳದ 30% ತ್ಯಜಿಸಲು ರಾಷ್ಟ್ರಪತಿ ನಿರ್ಧಾರ

Last Updated 14 ಮೇ 2020, 19:45 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್–19 ವಿರುದ್ಧದ ಹೋರಾಟಕ್ಕೆ ನೆರವಾಗಲು ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಒಂದು ವರ್ಷ ಕಾಲ ತಮ್ಮ ಸಂಬಳದಲ್ಲಿ ಶೇಕಡ 30ರಷ್ಟು ತ್ಯಜಿಸಲು ನಿರ್ಧರಿಸಿದ್ದಾರೆ.

ಇದರ ಜೊತೆಗೆರಾಷ್ಟ್ರಪತಿ ಭವನದ ಖರ್ಚು ವೆಚ್ಚಗಳಲ್ಲೂ ಕಡಿಮೆ ಮಾಡಲು ನಿರ್ಧರಿಸಲಾಗಿದೆ. ಅಂತರ ಕಾಯ್ದುಕೊಳ್ಳುವ ಉದ್ದೇಶದಿಂದ ದೇಶದಲ್ಲಿ ಕೈಗೊಳ್ಳುವ ಪ್ರವಾಸ ಮತ್ತು ಕಾರ್ಯಕ್ರಮಗಳನ್ನು ಕಡಿಮೆ ಮಾಡುವುದಾಗಿ ಹೇಳಿದ್ದಾರೆ ಎಂದು ರಾಷ್ಟ್ರಪತಿ ಭವನ ತಿಳಿಸಿದೆ.

ಈ ಕ್ರಮಗಳಿಂದ ರಾಷ್ಟ್ರಪತಿ ಭವನದ ಪ್ರಸಕ್ತ ಹಣಕಾಸು ವರ್ಷದ ಬಜೆಟ್‌ನಲ್ಲಿ ಶೇಕಡ 20ರಷ್ಟು ಉಳಿತಾಯವಾಗಲಿದೆ ಎಂದು ಅಂದಾಜಿಸಲಾಗಿದೆ. ರಾಷ್ಟ್ರಪತಿ ಅವರು ಪ್ರತಿ ತಿಂಗಳಿಗೆ ₹ 5 ಲಕ್ಷ ಸಂಬಳ ಪಡೆಯುತ್ತಾರೆ.

ವಿಶೇಷ ಸಮಾರಂಭಗಳಿಗೆ ಬಳಸುವ ₹10 ಕೋಟಿ ಮೌಲ್ಯದ ಲಿಮೌಸಿನ್‌ ಕಾರಿನ ಖರೀದಿಯನ್ನು ಸಹ ಕೋವಿಂದ್‌ ಅವರು ಮುಂದೂಡಿದ್ದಾರೆ.

ಈ ಕ್ರಮಗಳಿಂದ ರಾಷ್ಟ್ರಪತಿ ಭವನದಿಂದ ಸುಮಾರು ₹40ರಿಂದ 45 ಕೋಟಿ ಉಳಿತಾಯವಾಗಲಿದೆ. ರಾಷ್ಟ್ರಪತಿ ಭವನಕ್ಕೆ ವಾರ್ಷಿಕ ₹200 ಕೋಟಿ ಬಜೆಟ್‌ ನಿಗದಿಪಡಿಸಲಾಗಿದೆ. ಇದರಲ್ಲಿ ₹80.98 ಕೋಟಿ ಸಿಬ್ಬಂದಿ ಮತ್ತು ರಾಷ್ಟ್ರಪತಿ ಅವರ ಭತ್ಯೆಯೂ ಸೇರಿದೆ.

‘ಇದೊಂದು ಸಣ್ಣ ಕ್ರಮ. ಆದರೆ, ಮಹತ್ವದ ಕೊಡುಗೆಯಾಗಿದೆ. ಭಾರತವನ್ನು ಸ್ವಾವಲಂಬನೆಯ ದೇಶವನ್ನಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ. ದೇಶದ ಅಭಿವೃದ್ದಿ ಮತ್ತು ಪ್ರಗತಿಗಾಗಿ ನಾವೆಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕಾಗಿದೆ’ ಎಂದು ರಾಷ್ಟ್ರಪತಿ ಭವನದ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT