ಬುಧವಾರ, ಏಪ್ರಿಲ್ 1, 2020
19 °C

ಲೇಹ್‌ನಲ್ಲಿರುವ 34ರ ಹರೆಯದ ಯೋಧನಿಗೆ ಕೋವಿಡ್-19 ಸೋಂಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ನವದೆಹಲಿ: ಜಮ್ಮು ಕಾಶ್ಮೀರದ ಲೇಹ್‌ನಲ್ಲಿರುವ ಭಾರತೀಯ ಸೇನೆಯ ಯೋಧನಿಗೆ  ಕೋವಿಡ್ -19 ಸೋಂಕು ತಗಲಿರುವುದು ದೃಢಪಟ್ಟಿದೆ. ಸೇನಾಪಡೆಯಲ್ಲಿ ಕೋವಿಡ್-19 ಸೋಂಕು ತಗಲಿರುವ ಮೊದಲ ಪ್ರಕರಣ ಇದಾಗಿದೆ.

ಲೇಹ್‌ನಲ್ಲಿರುವ ಚುಹೋಟ್ ಗ್ರಾಮ ನಿವಾಸಿಯಾಗಿರುವ ಈ ಯೋಧನ ಅಪ್ಪನಿಗೆ ಸೋಂಕು ತಗಲಿತ್ತು. ಇವರ ಅಪ್ಪ ಇರಾನ್‌ಗೆ ತೀರ್ಥಯಾತ್ರೆಗೆ ಹೋಗಿ ಫೆಬ್ರುವರಿ 27ಕ್ಕೆ ಏರ್ ಇಂಡಿಯಾ ವಿಮಾನದಲ್ಲಿ ಮರಳಿದ್ದರು. ಅವರನ್ನು ಲಡಾಕ್ ಹಾರ್ಟ್ ಫೌಂಡೇಷನ್‌ನಲ್ಲಿ ಫೆಬ್ರುವರಿ 29ರಿಂದ ಪ್ರತ್ಯೇಕ ಕೋಣೆಯಲ್ಲಿರಿಸಿ ನಿಗಾ ಇಡಲಾಗಿದೆ. ಅಪ್ಪನ ಸಂಪರ್ಕದಿಂದಲೇ ಯೋಧನಿಗೆ ಸೋಂಕು ತಗಲಿದೆ.

ಇದನ್ನೂ ಓದಿ: ಕೋವಿಡ್-19: ಭಾರತದಲ್ಲಿ ರೋಗಿಗಳ ಸಂಖ್ಯೆ 148ಕ್ಕೆ ಏರಿಕೆ

ಫೆಬ್ರುವರಿ 25ರಿಂದ ಮಾರ್ಚ್ 1ರವರೆಗೆ ರಜೆಯಲ್ಲಿದ್ದ ಯೋಧ ಮಾರ್ಚ್2ರಂದು ಕರ್ತವ್ಯಕ್ಕೆ  ಹಾಜರಾಗಿದ್ದರು. ಅಪ್ಪನಿಗೆ ಈತ ಸಹಾಯ ಮಾಡುತ್ತಿದ್ದು, ಕೆಲವು ದಿನಗಳ ಕಾಲ ಊರಲ್ಲಿ ತಂಗಿದ್ದನು ಎಂದು ಸೇನೆಯ ಅಧಿಕಾರಿಗಳು ಹೇಳಿದ್ದಾರೆ.

ಇವರ ಅಪ್ಪನಿಗೆ ಕೋವಿಡ್-19 ಸೋಂಕು ತಗಲಿರುವುದು ಮಾರ್ಚ್ 6ಕ್ಕೆ ತಿಳಿದು ಬಂದಿತ್ತು. ಮಾರ್ಚ್ 16ಕ್ಕೆ ಯೋಧನನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಸೋಂಕು ತಗಲಿರುವುದು ದೃಢಪಟ್ಟಿದೆ. ಮರುದಿನವೇ ಅವರನ್ನು ಪ್ರತ್ಯೇಕವಾಗಿಡಲಾಗಿದೆ. ಯೋಧನ ಸಹೋದರಿ, ಪತ್ನಿ ಮತ್ತು ಮಕ್ಕಳನ್ನು ಸೋನಮ್ ನರ್ಬೊ ಮೆಮೊರಿಯಲ್ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿರಿಸಿ ನಿಗಾ ಇಡಲಾಗಿದೆ.
 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು