ನವದೆಹಲಿ ಕಾರ್ಖಾನೆಯಲ್ಲಿ ಬೆಂಕಿ; 4 ಮಂದಿ ಸಜೀವ ದಹನ

7
ಘಟನೆಯ ಕಾರಣ ತಿಳಿದು ಬಂದಿಲ್ಲ

ನವದೆಹಲಿ ಕಾರ್ಖಾನೆಯಲ್ಲಿ ಬೆಂಕಿ; 4 ಮಂದಿ ಸಜೀವ ದಹನ

Published:
Updated:

ನವದೆಹಲಿ: ಇಲ್ಲಿನ ಕರೋಲ್ ಬಾಗ್‌ನ ಕಾರ್ಖಾನೆಯಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, 4 ಮಂದಿ ಸಜೀವ ದಹನವಾಗಿದ್ದಾರೆ. ಒಬ್ಬರು ಗಾಯಗೊಂಡಿದ್ದಾರೆ.

ಮೃತರನ್ನು ಬಾಗನ್ ಪ್ರಸಾದ್ (55),  ಆರ್‌.ಎಮ್‌ ನರೇಶ್ (40), ಆರತಿ (20) ಮತ್ತು ಆಶಾ (40) ಎಂದು ಗುರುತಿಸಲಾಗಿದೆ. ಗಾಯಗೊಂಡ ಅಜೀತ್ (25) ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 

ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿದ್ದು, ಕಾರ್ಯಾಚರಣೆ ಮುಂದುವರೆದಿದೆ ಎಂದು ದೆಹಲಿಯ ಅಗ್ನಿಶಾಮಕ ದಳ ಸಿಬ್ಬಂದಿ ತಿಳಿಸಿದರು. 

ಘಟನೆಯು ಸುಮಾರು 12.30ಕ್ಕೆ ಸಂಭವಿಸಿದೆ. ನಡೆದ ಅರ್ಧಗಂಟೆಯೊಳಗೆ ಬೆಂಕಿ ಹರಡಿದೆ. ಈ ಅನಾಹುತದ ನಿಖರ ಕಾರಣ ತಿಳಿದು ಬಂದಿಲ್ಲ ಎಂದು ಹೇಳಿದರು. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 2

  Sad
 • 1

  Frustrated
 • 0

  Angry

Comments:

0 comments

Write the first review for this !