ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

4 ಹೊಸ ಪ್ರಕರಣ ಬೆಳಕಿಗೆ: ಮೂರು ವರ್ಷದ ಮಗುವಿನಲ್ಲಿ ಕೋವಿಡ್‌ –19 ಸೋಂಕು ಪತ್ತೆ

Last Updated 9 ಮಾರ್ಚ್ 2020, 20:40 IST
ಅಕ್ಷರ ಗಾತ್ರ

ನವದೆಹಲಿ: ‘ಕೇರಳದಲ್ಲಿ ಮೂರು ವರ್ಷದ ಮಗುವಿನಲ್ಲಿಕೋವಿಡ್‌–19 ಸೋಂಕು ಇರುವುದು ದೃಢಪಟ್ಟಿದೆ. ಇದರೊಂದಿಗೆ ದೇಶದಲ್ಲಿ ನಾಲ್ಕು ಹೊಸ ಪ್ರಕರಣಗಳು ಬೆಳಕಿಗೆ ಬಂದಿದ್ದು, ಸೋಂಕಿತರ ಸಂಖ್ಯೆ 43ಕ್ಕೆ ಏರಿದೆ’ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸೋಮವಾರ ಮಾಹಿತಿ ನೀಡಿದೆ.

‘ದೆಹಲಿ, ಉತ್ತರ ಪ್ರದೇಶ ಮತ್ತು ಜಮ್ಮುವಿನಿಂದ ಮೂರು ಪ್ರಕರಣಗಳು ದಾಖಲಾಗಿವೆ. ಆದರೆ,ದೇಶದಲ್ಲಿ ಇಲ್ಲಿಯವರೆಗೂ ಸೋಂಕಿನಿಂದ ಸಾವು ಸಂಭವಿಸಿಲ್ಲ’ ಎಂದಿದೆ.

‘ಇಟಲಿಯಿಂದ ಮಾರ್ಚ್‌ 7ರಂದು ದಂಪತಿ ಮತ್ತು ಮಗು ಕೇರಳಕ್ಕೆ ಬಂದಿದ್ದರು. ಕುಟುಂಬವನ್ನು ಕಳಮಶ್ಶೇರಿ ವೈದಕೀಯ ಕಾಲೇಜಿನ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಪೋಷಕರ ರಕ್ತದ ಮಾದರಿಗಳನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದರು.

‘ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ ಜಿಲ್ಲೆಯಲ್ಲಿ ಭಾನುವಾರ ಒಬ್ಬ ವ್ಯಕ್ತಿಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಆದರೆ, ಇವರಲ್ಲಿ ಸೋಂಕು ಇರಲಿಲ್ಲ. ಸೌದಿ ಅರೇಬಿಯಾದಿಂದ ವಾಪಾಸಾಗಿದ್ದ ಇವರಲ್ಲಿ ಸೋಂಕಿನ ಲಕ್ಷಣಗಳು ಕಂಡುಬಂದಿದ್ದರಿಂದ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು’ ಎಂದು ಸಚಿವಾಲಯ ಹೇಳಿಕೆಯಲ್ಲಿ ಹೇಳಿದೆ.

‘3,003 ಮಾದರಿಗಳನ್ನು ಪರೀಕ್ಷೆ ಮಾಡಿದ್ದು, ಇದರಲ್ಲಿ 43 ಮಾದರಿಗಳಲ್ಲಿ ಸೋಂಕು ಇರುವುದು ಪತ್ತೆಯಾಗಿದೆ. ವಿಮಾನ ನಿಲ್ದಾಣಗಳಲ್ಲಿ 8,74,708 ವಿದೇಶಿ ಪ್ರಯಾಣಿಕರನ್ನುಇಲ್ಲಿಯವರೆಗೆ ತಪಾಸಣೆ ಮಾಡಲಾಗಿದೆ. ಈ 1,921 ಮಂದಿಯಲ್ಲಿ ಸೋಂಕಿನ ಲಕ್ಷಣ ಇರುವುದಾಗಿ ಗುರುತಿಸಲಾಗಿದೆ. 177 ಜನರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ತಮ್ಮ ಪ್ರವಾಸದ ಮಾಹಿತಿಯನ್ನು ಕಡ್ಡಾಯವಾಗಿ ಘೋಷಣಾ ಪತ್ರದಲ್ಲಿ ನಮೂದಿಸಬೇಕು ಎಂದು ಸಚಿವಾಲಯ ಸಾರ್ವಜನಿಕರಲ್ಲಿ ವಿನಂತಿ ಮಾಡಿದೆ.

ಅಹಮದಾಬಾದ್‌ ವರದಿ: ‘ದಂಡಿ ಯಾತ್ರೆಗೆ’ 90 ವರ್ಷ ಸಂದ ಸ್ಮರಣಾರ್ಥ ಮಹಾತ್ಮ ಗಾಂಧೀಜಿ ಮರಿಮೊಮ್ಮಗ ತುಷಾರ್‌ ಗಾಂಧಿ ಅವರು ಸಾಬರಮತಿ ಆಶ್ರಮದಿಂದ ದಂಡಿಯವರೆಗೆ ಮಾರ್ಚ್‌ 12ರಿಂದ ಯಾತ್ರೆ ಕೈಗೊಳ್ಳಲಿದ್ದಾರೆ.

ಇದೇ ರೀತಿ ಕಾಂಗ್ರೆಸ್‌ ಸಹ ‘ಗಾಂಧಿ ಸಂದೇಶ ಯಾತ್ರೆ’ಯನ್ನು ಮಾಡುವುದಾಗಿ ಘೋಷಿಸಿತ್ತು. ಆದರೆ, ಹೆಚ್ಚುತ್ತಿರುವ ಕೋವಿಡ್‌–19 ಸೋಂಕಿನ ಕಾರಣ, ಯಾತ್ರೆಯನ್ನು ಮಾಡುವುದಿಲ್ಲ ಎಂದು ಗುಜರಾತ್‌ ಉಸ್ತುವಾರಿಯಾಗಿರುವ ಕಾಂಗ್ರೆಸ್‌ ನಾಯಕರಾಜೀವ್‌ ಸಾತವ್‌ ಅವರುಸೋಮವಾರ ಟ್ವೀಟ್‌ ಮಾಡಿದ್ದಾರೆ.

ರೋಗ ತಡೆಗಟ್ಟುವ ಮಾರ್ಗಸೂಚಿಗಳನ್ನು ಎಲ್ಲ ರಾಜ್ಯಗಳಿಗೆ ನೀಡಲಾಗಿದೆ. ಪ್ರಯೋಗಾಲಯಗಳನ್ನು ಹೆಚ್ಚಿಸಿಲು ನಿರ್ದೇಶನ ನೀಡಲಾಗಿದೆ. ಹರ್ಷ ವರ್ಧನ್‌, ಕೇಂದ್ರ ಆರೋಗ್ಯ ಸಚಿವ ನಿಗಾ ಘಟಕ ಸ್ಥಾಪನೆಗೆ ನಿರ್ದೇಶನ ದೇಶದಲ್ಲಿನ ಸೋಂಕಿತರನ್ನು ಇರಿಸಲು ಪ್ರತ್ಯೇಕ ನಿಗಾ ಘಟಕಗಳನ್ನು ಸ್ಥಾಪಿಸುವಂತೆ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗೆ (ಸಿಎಪಿಎಫ್‌) ಕೇಂದ್ರ ಸರ್ಕಾ ರಸೋಮವಾರ ನಿರ್ದೇಶನ ನೀಡಿದೆ.

ದೇಶದ 37 ಕಡೆಗಳಲ್ಲಿ 5,440 ಹಾಸಿಗೆಗಳಿರುವ ನಿಗಾ ಘಟಕಗಳನ್ನು ನಿರ್ಮಿಸುವುದರ ಜತಗೆ, 75 ಪ್ರತ್ಯೇಕ ವಾರ್ಡ್‌ಗಳನ್ನೂ ನಿರ್ಮಿಸಬೇಕು ಎಂದು ಕೇಂದ್ರ ಮೀಸಲು ಪಡೆ, ಗಡಿ ಭದ್ರತಾ ಪಡೆ, ಕೇಂದ್ರ ಕೈಗಾರಿಕಾ ಭದ್ರತಾ ಪಡೆ, ಭಾರತ–ಟಿಬೆಟ್‌ ಗಡಿ ಭದ್ರತಾ ಪೊಲೀಸ್‌, ಸಶಸ್ತ್ರ ಸೀಮಾ ಬಲ ಮತ್ತು ರಾಷ್ಟ್ರೀಯ ಭದ್ರತಾ ಪಡೆಗೆ ನಿರ್ದೇಶನ ನೀಡಲಾಗಿದೆ.

ಸೇನಾ ಪಡೆಗಳೊಂದಿಗೆ ಕೆಲಸ ಮಾಡುವ ಡಾಕ್ಟರ್‌, ಅರೆ ವೈದ್ಯಕೀಯ ಸಿಬ್ಬಂದಿ ಮತ್ತು ನೈರ್ಮಲ್ಯ ಅಧಿಕಾರಿಗಳಿಗೆ ನಿಗಾ ಘಟಕಗಳ ನಿರ್ವಹಣೆಗೆ ನೇಮಿಸಬೇಕು ಎಂದು ಹೇಳಿದೆ.

ನಿಗಾ ಘಟಕ ಸ್ಥಾಪನೆಗೆ ನಿರ್ದೇಶನ
ದೇಶದಲ್ಲಿನ ಸೋಂಕಿತರನ್ನು ಇರಿಸಲು ಪ್ರತ್ಯೇಕ ನಿಗಾ ಘಟಕಗಳನ್ನು ಸ್ಥಾಪಿಸುವಂತೆ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗೆ (ಸಿಎಪಿಎಫ್‌) ಕೇಂದ್ರ ಸರ್ಕಾರಸೋಮವಾರ ನಿರ್ದೇಶನ ನೀಡಿದೆ.

ದೇಶದ 37 ಕಡೆಗಳಲ್ಲಿ 5,440 ಹಾಸಿಗೆಗಳಿರುವ ನಿಗಾ ಘಟಕಗಳನ್ನು ನಿರ್ಮಿಸುವುದರ ಜತಗೆ, 75 ಪ್ರತ್ಯೇಕ ವಾರ್ಡ್‌ಗಳನ್ನೂ ನಿರ್ಮಿಸಬೇಕು ಎಂದು ಕೇಂದ್ರ ಮೀಸಲು ಪಡೆ, ಗಡಿ ಭದ್ರತಾ ಪಡೆ, ಕೇಂದ್ರ ಕೈಗಾರಿಕಾ ಭದ್ರತಾ ಪಡೆ, ಭಾರತ–ಟಿಬೆಟ್‌ ಗಡಿ ಭದ್ರತಾ ಪೊಲೀಸ್‌, ಸಶಸ್ತ್ರ ಸೀಮಾ ಬಲ ಮತ್ತು ರಾಷ್ಟ್ರೀಯ ಭದ್ರತಾ ಪಡೆಗೆ ನಿರ್ದೇಶನ ನೀಡಲಾಗಿದೆ.

ಸೇನಾ ಪಡೆಗಳೊಂದಿಗೆ ಕೆಲಸ ಮಾಡುವ ಡಾಕ್ಟರ್‌, ಅರೆ ವೈದ್ಯಕೀಯ ಸಿಬ್ಬಂದಿ ಮತ್ತು ನೈರ್ಮಲ್ಯ ಅಧಿಕಾರಿಗಳಿಗೆ ನಿಗಾ ಘಟಕಗಳ ನಿರ್ವಹಣೆಗೆ ನೇಮಿಸಬೇಕು ಎಂದು ಹೇಳಿದೆ.

‘ಬಯೋಮೆಟ್ರಿಕ್‌ ಬಳಕೆ ನಿಲ್ಲಿಸಿ’
ಸೋಂಕಿನ ಹಿನ್ನೆಲೆಯಲ್ಲಿ, ನ್ಯಾಯಾಲಯದಲ್ಲಿ ಬಯೋಮೆಟ್ರಿಕ್‌ ಯಂತ್ರಗಳ ಬಳಕೆಯನ್ನು ಮಾರ್ಚ್‌ 31ವರೆಗೆ ನಿಲ್ಲಿಸುವಂತೆ ರಾಷ್ಟ್ರೀಯ ಹಸಿರು ಪೀಠ ನೋಟಿಸ್‌ ಜಾರಿ ಮಾಡಿದೆ.ಈ ಬದಲಾವಣೆಯು ತಕ್ಷಣದಲ್ಲಿ ಜಾರಿಯಾಗಬೇಕು ಎಂದಿದೆ.

‘ಈ ಅವಧಿಯಲ್ಲಿಮೇಲ್ವಿಚಾರಕರ ಉಸ್ತುವಾರಿಯಲ್ಲಿ ಕಚೇರಿಗೆ ಆಗಮಿಸಿದ ಮತ್ತು ನಿರ್ಗಮಿಸಿದ ಸಮಯದೊಂದಿಗೆ ಎಲ್ಲರ ಹಾಜರಾತಿಯನ್ನು ಬರೆದಿಡಲಾಗುವುದು’ ಎಂದು ರಿಜಿಸ್ಟ್ರಾರ್‌ ಜನರಲ್‌ ಆಶು ಗಾರ್ಗ್‌ ಹೇಳಿದರು.

ವೈರಸ್‌ ಭೀತಿ ಹಿನ್ನೆಲೆಯಲ್ಲಿ ಎಲ್ಲಾ ಸ್ವಾಯತ್ತ ಸಂಸ್ಥೆ ಮತ್ತು ಪುರಸಭೆಗಳಲ್ಲಿ ಬಯೋಮೆಟ್ರಿಕ್‌ ಯಂತ್ರ ವ್ಯವಸ್ಥೆಯನ್ನು ಕೈಬಿಡುವಂತೆದೆಹಲಿ ಸರ್ಕಾರವು ಇತ್ತೀಚೆಗೆ ನಿರ್ದೇಶನ ನೀಡಿತ್ತು.

ನ್ಯಾಯಾಲಯದ ಆವರಣದಲ್ಲಿ ‘ಅನಗತ್ಯ ಜನದಟ್ಟಣೆ’ಯನ್ನು ತಪ್ಪಿಸಿ ಎಂದು ವಕೀಲರು ಹಾಗೂ ನ್ಯಾಯಾಲಯಕ್ಕೆ ಬರುವವರಲ್ಲಿದೆಹಲಿ ಹೈಕೋರ್ಟ್‌ ಕೇಳಿಕೊಂಡಿದೆ.

‘ಇಟಲಿಯಿಂದ ಬಂದ ಮಾಹಿತಿ ನೀಡಿಲ್ಲ’
ಪತ್ತನಂತಿಟ್ಟ:
ಇಟಲಿಯಿಂದ ಕೇರಳಕ್ಕೆ ಬಂದಿಳಿದ ಒಂದೇ ಕುಟುಂಬದ ಐವರಲ್ಲಿ ಭಾನುವಾರ ಸೋಂಕು ಪತ್ತೆ ಆಗಿದೆ. ಆದರೆ, ದಂಪತಿ ಮತ್ತು ಅವರ ಮಗ, ತಾವು ಇಟಲಿಯಿಂದ ಬಂದಿರುವುದಾಗಿ ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಮಾಹಿತಿ ನೀಡಿರಲಿಲ್ಲ ಎಂದು ಕೇರಳ ಸರ್ಕಾರ ಹೇಳಿದೆ.

ಇದನ್ನು ನಿರಾಕರಿಸಿರುವ ಸೋಂಕಿತರು, ತಾವು ಇಟಲಿಯಿಂದ ಬಂದಿರುವುದಾಗಿ ಅಧಿಕಾರಿಗಳಿಗೆ ತಿಳಿಸಿದ್ದೇವು. ಆದರೆ, ಅವರು ತಪಾಸಣೆ ಕುರಿತು ನಿರ್ದೇಶನ ನೀಡಲಿಲ್ಲ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT