ಶಬರಿಮಲೆ ದೇಗುಲ ಪ್ರವೇಶಿಸಿದ ನಾಲ್ವರು ತೃತೀಯಲಿಂಗಿಗಳು

7

ಶಬರಿಮಲೆ ದೇಗುಲ ಪ್ರವೇಶಿಸಿದ ನಾಲ್ವರು ತೃತೀಯಲಿಂಗಿಗಳು

Published:
Updated:
Deccan Herald

ಶಬರಿಮಲೆ: ನಾಲ್ವರು ತೃತೀಯ ಲಿಂಗಿಗಳು ಬಿಗಿ ಪೊಲೀಸ್‌ ಭದ್ರತೆಯಲ್ಲಿ ಮಂಗಳವಾರ ಅಯ್ಯಪ್ಪ ಸ್ವಾಮಿ ದೇವಾಲಯ ಪ್ರವೇಶಿಸಿ, ಪೂಜೆ ಸಲ್ಲಿಸಿದರು. 

ಸಂಪ್ರದಾಯದಂತೆ ಕಪ್ಪು ಸೀರೆ ಧರಿಸಿ, ಇರುಮುಡಿ ಹೊತ್ತಿದ್ದ ತೃತೀಯ ಲಿಂಗಿಗಳಾದ ಅನನ್ಯ, ತೃಪ್ತಿ, ರೆಂಜುಮೊಲ್ ಹಾಗೂ ಅವಂತಿಕ ಅವರಿಗೆ ನಿಲಾಕ್ಕಲ್‌ನಿಂದ ಪಂಪಾನದಿಯವರೆಗೂ ಪೊಲೀಸರು ಭದ್ರತೆ ಒದಗಿಸಿದರು. 

‘ದೇವರ ದರ್ಶನದಿಂದ ಅತೀವ ಸಂತೋಷವಾಗಿದೆ. ಶಬರಿಮಲೆಗೆ ಬರುವುದು ಜೀವನದ ಗುರಿಯಾಗಿತ್ತು’ ಎಂದು ಅವರು ತಿಳಿಸಿದ್ದಾರೆ. 

ಕೇರಳ ಹೈಕೋರ್ಟ್ ನಿಯೋಜಿತ ಮೇಲುಸ್ತುವಾರಿ ಸಮಿತಿ ಸದಸ್ಯ, ಡಿಜಿಪಿ ಎ. ಹೇಮಚಂದ್ರನ್ ಹಾಗೂ ಐಜಿಪಿ ಮನೋಜ್ ಅಬ್ರಾಹಂ ಅವರನ್ನು ಸೋಮವಾರ ಈ ತೃತೀಯ ಲಿಂಗಿಗಳು ಭೇಟಿ ಮಾಡಿದ ನಂತರ ದೇವಾಲಯಕ್ಕೆ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ.

ಬರಹ ಇಷ್ಟವಾಯಿತೆ?

 • 21

  Happy
 • 1

  Amused
 • 1

  Sad
 • 1

  Frustrated
 • 3

  Angry

Comments:

0 comments

Write the first review for this !