ದೆಹಲಿ: 40 ಸೇವೆಗಳು ಮನೆಬಾಗಿಲಿಗೆ

7

ದೆಹಲಿ: 40 ಸೇವೆಗಳು ಮನೆಬಾಗಿಲಿಗೆ

Published:
Updated:

ನವದೆಹಲಿ: ದೆಹಲಿ ರಾಜ್ಯ ಸರ್ಕಾರದ 40 ಸೇವೆಗಳು ಇನ್ನು ಮುಂದೆ ದೆಹಲಿ ನಿವಾಸಿಗಳ ಮನೆಬಾಗಿಲಿಗೆ ಬರಲಿವೆ.

ವಾಹನ ಚಾಲನಾ ಪತ್ರ, ಪಡಿತರ ಚೀಟಿ, ವಿವಾಹ ನೋಂದಣಿ ಪ್ರಮಾಣಪತ್ರ, ಜಾತಿ ಪ್ರಮಾಣಪತ್ರ, ಜನನ ಪ್ರಮಾಣಪತ್ರ, ನೀರಿನ ಸಂಪರ್ಕ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಈ ಯೋಜನೆಯಲ್ಲಿ ಸೇರಿಸಲಾಗಿದೆ.

ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ಯೋಜನೆಗೆ ಚಾಲನೆ ನೀಡಿ, ಇದು ‘ಆಡಳಿತದಲ್ಲಿ ಕ್ರಾಂತಿಕಾರಕ ಬದಲಾವಣೆ’ ಎಂದು ಬಣ್ಣಿಸಿದರು. ಸರ್ಕಾರದ ಸೇವೆಗಳನ್ನು ಮನೆಬಾಗಿಲಿಗೆ ತಲುಪಿಸುವ ಮೂಲಕ ಆಮ್‌ ಆದ್ಮಿ ಪಾರ್ಟಿಯ ಸರ್ಕಾರ ಇಡೀ ದೇಶ ಹಾಗೂ ಜಗತ್ತಿಗೆ ಮಾದರಿಯಾಗಿದೆ ಎಂದರು.

ಮುಂದಿನ ತಿಂಗಳೊಳಗೆ ಮತ್ತೆ 30 ಸೇವೆಗಳನ್ನು ಈ ಯೋಜನೆ ವ್ಯಾಪ್ತಿಗೆ ಒಳಪಡಿಸಲಾಗುವುದು. ಮುಂದಿನ ಎರಡು–ಮೂರು ತಿಂಗಳಲ್ಲಿ ಒಟ್ಟು 100 ಸೇವೆಗಳನ್ನು ಮನೆಬಾಗಿಲಿಗೆ ತಲುಪಿಸುವ ಗುರಿ ಹೊಂದಲಾಗಿದೆ. ಈ ಯೋಜನೆ ಅನುಷ್ಠಾನಕ್ಕೆ ₹12 ಕೋಟಿ ವೆಚ್ಚ ಆಗಲಿದೆ. ಪಡಿತರವನ್ನು ಸಹ ಮನೆಬಾಗಿಲಿಗೆ ತಲುಪಿಸುವ ಪ್ರಸ್ತಾವ ಇದೆ ಎಂದು ಹೇಳಿದರು.

ಈ ಸೇವೆಗಳಿಗಾಗಿ 1076ಕ್ಕೆ ಕರೆ ಮಾಡಿ ತಿಳಿಸಬೇಕು. ಬೆಳಿಗ್ಗೆ 8ರಿಂದ ರಾತ್ರಿ 10ರವರೆಗೆ ಸೇವೆಗಳನ್ನು ಒದಗಿಸಲಾಗುವುದು. ಈ ಸೇವೆಗೆ ಹೆಚ್ಚುವರಿಯಾಗಿ ₹50 ನಿಗದಿಪಡಿಸಲಾಗಿದೆ.

ಮುಖ್ಯಾಂಶಗಳು

66 ಮೊಬೈಲ್‌ ಸಹಾಯಕರ ನೇಮಕ

ಮೊಬೈಲ್‌ ಸಹಾಯಕರಿಗೆ ಬಯೊಮೆಟ್ರಿಕ್‌, ಕ್ಯಾಮೆರಾ ಸೌಲಭ್ಯ

ದಿನದ 24 ಗಂಟೆಯೂ ಸೇವೆ ಲಭ್ಯ

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !