ಪ್ರಧಾನಿ ಮೋದಿ ವಿದೇಶ ಪ್ರವಾಸಗಳಿಗೆ ₹355 ಕೋಟಿ ಖರ್ಚು

7
41 ಪ್ರವಾಸ, 52 ದೇಶಗಳಿಗೆ ಭೇಟಿ

ಪ್ರಧಾನಿ ಮೋದಿ ವಿದೇಶ ಪ್ರವಾಸಗಳಿಗೆ ₹355 ಕೋಟಿ ಖರ್ಚು

Published:
Updated:

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ಕಳೆದ ನಾಲ್ಕು ವರ್ಷಗಳ ಅಧಿಕಾರಾವಧಿಯಲ್ಲಿ 41 ಪ್ರವಾಸ ಕೈಗೊಂಡಿದ್ದು 52 ದೇಶಗಳಿಗೆ ಭೇಟಿ ನೀಡಿದ್ದಾರೆ. ಒಟ್ಟು 165 ದಿನ ಅವರು ವಿದೇಶದಲ್ಲಿದ್ದರು. ವಿದೇಶ ಪ್ರವಾಸಗಳಿಗೆ ಒಟ್ಟು ₹355 ಕೋಟಿ ಖರ್ಚಾಗಿದೆ ಎಂದು ಪ್ರಧಾನಿ ಕಾರ್ಯಾಲಯ ಮಾಹಿತಿ ನೀಡಿದೆ.

‘ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ್ ಅವರು ಸಲ್ಲಿಸಿರುವ ಅರ್ಜಿಗೆ ಪ್ರಧಾನಿ ಕಾರ್ಯಾಲಯ ಈ ಮಾಹಿತಿ ನೀಡಿದೆ. ಅವರು ಅದನ್ನು ನಮ್ಮ ಜತೆ ಹಂಚಿಕೊಂಡಿದ್ದಾರೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ ವರದಿ ಮಾಡಿದೆ.

ಪ್ರಧಾನಿ ಪ್ರವಾಸಗಳ ಪೈಕಿ ಅತಿ ಹೆಚ್ಚು ಖರ್ಚಾಗಿರುವುದು 2015ರ ಏಪ್ರಿಲ್‌ 9ರಿಂದ 15ರ ನಡುವೆ ಅವರು ಕೈಗೊಂಡಿದ್ದ 9 ದಿನಗಳ ತ್ರಿರಾಷ್ಟ್ರ ಭೇಟಿಗೆ. ಆಗ ಅವರು ಜರ್ಮನಿ, ಕೆನಡಾ ಮತ್ತು ಫ್ರಾನ್ಸ್‌ಗೆ ಭೇಟಿ ನೀಡಿದ್ದರು. ಈ ಪ್ರವಾಸಕ್ಕೆ ಸುಮಾರು ₹31 ಕೋಟಿ ಖರ್ಚಾಗಿದೆ. ಪ್ರಧಾನಿ ಪ್ರವಾಸಗಳ ಪೈಕಿ ಕಡಿಮೆ ಖರ್ಚಾಗಿರುವುದು 2014ರ ಜೂನ್ 15–16ರ ಭೂತಾನ್ ಭೇಟಿಗೆ. ಇದಕ್ಕೆ ಸುಮಾರು ₹2.45 ಕೋಟಿ ಖರ್ಚಾಗಿದೆ.

ಕುತೂಹಲದಿಂದ ಪ್ರಧಾನಿ ಅವರ ವಿದೇಶ ಪ್ರವಾಸಗಳ ಖರ್ಚಿನ ಬಗ್ಗೆ ಮಾಹಿತಿ ಕೇಳಿ ಅರ್ಜಿ ಸಲ್ಲಿಸಿದ್ದೆ ಎಂದು ಗಡಾದ್ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 26

  Happy
 • 3

  Amused
 • 1

  Sad
 • 2

  Frustrated
 • 5

  Angry

Comments:

0 comments

Write the first review for this !