ಶನಿವಾರ, ನವೆಂಬರ್ 16, 2019
22 °C

18 ಗಂಟೆಗಳ ಕಾರ್ಯಾಚರಣೆ ವಿಫಲ: 50 ಅಡಿ ಆಳದ ಕೊಳವೆಬಾವಿಗೆ ಬಿದ್ದಿದ್ದ ಬಾಲಕಿ ಸಾವು

Published:
Updated:

ಚಂಡಿಗಡ: ಹರಿಯಾಣದ ಕರ್ನಾಲ್ ಜಿಲ್ಲೆಯಲ್ಲಿ 50 ಅಡಿ ಆಳದ ಕೊಳವೆಬಾವಿಗೆ ಬಿದ್ದಿದ್ದ 5 ವರ್ಷದ ಬಾಲಕಿ ಮೃತಪಟ್ಟಿದ್ದು ಸೋಮವಾರ ಮಧ್ಯಾಹ್ನ ಮೃತ ದೇಹವನ್ನು ಹೊರತೆಗೆಯಲಾಗಿದೆ.

ಕಳೆದ 18 ಗಂಟೆಗಳಿಂದ ಪೊಲೀಸರು, ಆಗ್ನಿಶಾಮಕ ಸಿಬ್ಬಂದಿ ಹಾಗೂ ಎನ್‌ಡಿಆರ್‌ಎಫ್‌ ತಂಡದವರು ನಡೆಸಿದ ಕಾರ್ಯಾಚರಣೆ ಫಲ ನೀಡಲಿಲ್ಲ. ಅಂತಿಮವಾಗಿ ಬಾಲಕಿಯ ಮೃತ ದೇಹವನ್ನು ಹೊರ ತೆಗೆಲಾಯಿತು ಎಂದು ಕರ್ನಾಲ್ ಜಿಲ್ಲಾಡಳಿತ ತಿಳಿಸಿದೆ. 

ಇದನ್ನೂ ಓದಿ: ಮೃತ್ಯುಕೂಪಗಳಾದ ಕೊಳವೆಬಾವಿಗಳು: ಯಾರು ಹೊಣೆ?

ಕರ್ನಾಲ್ ಜಿಲ್ಲೆಯ ಹರಿಸಿಂಗ್‌ಪುರ ಹಳ್ಳಿಯಲ್ಲಿ ಭಾನುವಾರ 50 ಅಡಿ ಆಳದ ಕೊಳವೆಬಾವಿಗೆ 5 ವರ್ಷದ ಬಾಲಕಿ ಬಿದ್ದಿದ್ದಳು. ಬಾಲಕಿ ನಾಪತ್ತೆಯಾಗಿರುವುದು ತಿಳಿದ ಬಳಿಕ ಪೋಷಕರು ‌ಹುಡುಕಾಟ ನಡೆಸಿದ್ದರು. ನಂತರ ಬಾಲಕಿ ಕೊಳವೆಬಾವಿಗೆ ಬಿದ್ದಿರುವುದು ಗೊತ್ತಾಗಿತ್ತು.

ಘಟನೆ ನಡೆದ ಕೆಲವು ಗಂಟೆಗಳ ಬಳಿಕ ಎನ್‌ಡಿಆರ್‌ಎಫ್‌ ತಂಡ ಬಂದು ಕಾರ್ಯಾಚರಣೆ ಆರಂಭಿಸಿತ್ತು. ಬಾಲಕಿಯನ್ನು ಜೀವಂತವಾಗಿ ಮೇಲೆತ್ತಲು ನಡೆಸಿದ ಕಾರ್ಯಾಚರಣೆ ವಿಫಲವಾಯಿತು. 

ಇದನ್ನೂ ಓದಿ: ಕ್ಷಮಿಸು ತಾಯಿ, ನಿನ್ನ ಮಗನ ಸಾವಿನಿಂದಲೂ ಪಾಠ ಕಲಿಯುವ ಪುರುಸೊತ್ತು ಇವರಿಗಿಲ್ಲ

ಪ್ರತಿಕ್ರಿಯಿಸಿ (+)