ಬುಧವಾರ, ಅಕ್ಟೋಬರ್ 16, 2019
22 °C
ಪಿಒಕೆಯಲ್ಲಿ ಅಡಗಿರುವ 500 ಭಯೋತ್ಪಾದಕರು

ಕಾಶ್ಮೀರಕ್ಕೆ ನುಗ್ಗಲು ಉಗ್ರರ ಯತ್ನ

Published:
Updated:
Prajavani

ಭದ್ರೆವಾಹ್‌/ ಜಮ್ಮು : ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಇರುವ ತರಬೇತಿ ಶಿಬಿರಗಳಲ್ಲಿ ಸರಿ ಸುಮಾರು 500 ಉಗ್ರರು ಜಮ್ಮು ಮತ್ತು ಕಾಶ್ಮೀರಕ್ಕೆ ನುಗ್ಗಲು ಸರಿಯಾದ ಸಮಯಕ್ಕೆ ಕಾಯುತ್ತಿದ್ದಾರೆ ಎಂದು ಸೇನೆಯ ಹಿರಿಯ ಅಧಿಕಾರಿಯೊಬ್ಬರು ಶುಕ್ರವಾರ ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ರಹಸ್ಯ ಸ್ಥಳಗಳಲ್ಲಿ ಕುಳಿತು 200 ರಿಂದ 300 ಉಗ್ರರು ಕಾರ್ಯಾಚರಣೆ
ನಡೆಸುತ್ತಿದ್ದಾರೆ. ಪಾಕಿಸ್ತಾನದ ಬೆಂಬಲದೊಂದಿಗೆ ಇವರು ಪ್ರಕ್ಷುಬ್ಧಸ್ಥಿತಿ ಉಂಟಾಗುವಂತೆ ಸಂಚು ರೂಪಿಸುತ್ತಿದ್ದಾರೆ ಎಂದು ಉತ್ತರ ಕಮಾಂಡ್‌ನ ಮುಖ್ಯಸ್ಥ ಲೆ.ಜನರಲ್ ರಣಬೀರ್‌ ಸಿಂಗ್‌ ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ಹಾಗೂ ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಎಷ್ಟು ಉಗ್ರರು ಸಕ್ರಿಯರಾಗಿದ್ದಾರೆ ಎಂಬ ಪ್ರಶ್ನೆಗೆ ಸಿಂಗ್‌ ಉತ್ತರಿಸಿದರು. 

‘ಉಗ್ರರು ಎಷ್ಟೇ ಸಂಖ್ಯೆಯಲ್ಲಿರಲಿ, ಅವರನ್ನು ತಡೆದು ಸದೆಬಡಿಯಲು ನಾವು ಸನ್ನದ್ಧರಾಗಿದ್ದೇವೆ. ಆ ಮೂಲಕ ಈ ಪ್ರಾಂತ್ಯದಲ್ಲಿ ಶಾಂತಿ ಮತ್ತು ಸಹಜಸ್ಥಿತಿ ನೆಲೆಸುವಂತೆ ಮಾಡುತ್ತೇವೆ’ ಎಂಬ ಭರವಸೆಯನ್ನು ನೀಡಿದರು.

ಇಂದಿನಿಂದ ಪೋಸ್ಟ್‌ ಪೇಯ್ಡ್‌ ಮೊಬೈಲ್‌ ಕಾರ್ಯಾರಂಭ?

ಶ್ರೀನಗರ: ಕಾಶ್ಮೀರದಲ್ಲಿ ಪೋಸ್ಟ್‌ ಪೇಯ್ಡ್‌ ಮೊಬೈಲ್‌ ಸೇವೆ ಶನಿವಾರದಿಂದ ಆರಂಭವಾಗುವ ಸಾಧ್ಯತೆ ಇದೆ. ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷಾಧಿಕಾರ ರದ್ದುಪಡಿಸಿದ 68 ದಿನಗಳ ನಂತರ ಈ ಸೇವೆ ಆರಂಭವಾಗಲಿದೆ. ‌ಕಾಶ್ಮೀರ ಕಣಿವೆಯಲ್ಲಿ 40 ಲಕ್ಷ ಮಂದಿ ಪೋಸ್ಟ್ ಪೇಯ್ಡ್‌ ಸೇವೆ ಬಳಸುತ್ತಿದ್ದಾರೆ.

 

Post Comments (+)