ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

500 ವರ್ಷಗಳ ಹಿಂದಿನ ದೇವಾಲಯ ಪತ್ತೆ

Last Updated 14 ಜೂನ್ 2020, 7:59 IST
ಅಕ್ಷರ ಗಾತ್ರ

ಭುವನೇಶ್ವರ: ಒಡಿಶಾ ರಾಜ್ಯದ ಮಹಾನದಿಯಲ್ಲಿ ಮುಳುಗಿದ್ದ 500 ವರ್ಷಗಳಷ್ಟು ಹಿಂದಿನ ದೇವಾಲಯ ಪತ್ತೆಯಾಗಿದೆ ಎಂದು ನದಿ ಕಣವೆಯಲ್ಲಿನ ಪಾರಂಪರಿಕ ತಾಣದಲ್ಲಿ ದಾಖಲೀಕರಣ ಕಾರ್ಯ ಕೈಗೊಂಡಿದ್ದ ತಜ್ಞರು ಹೇಳಿದ್ದಾರೆ.

ದೇವಾಲಯ 15 ನೇ ಶತಮಾನದ ಉತ್ತರಾರ್ಧಕ್ಕೆ ಅಥವಾ 16ನೇ ಶತಮಾನದ ಪೂರ್ವಾರ್ಧಕ್ಕೆ ಸೇರಿದ್ದಾಗಿದೆ.ಎತ್ತರ 60ಅಡಿ ಇದೆ. ಕಟಕ್‌ನ ಬೈದೇಶ್ವರ್‌ ಬಳಿಯ ನದಿ ಮಧ್ಯಭಾಗದಲ್ಲಿ ದೇವಾಲಯ ಪತ್ತೆಯಾಗಿದೆ ಎಂದು ಭಾರತೀಯ ಕಲೆ ಮತ್ತು ಸಾಂಸ್ಕೃತಿಕ ಪರಂಪರೆಯ ರಾಷ್ಟ್ರೀಯ ಟ್ರಸ್ಟ್‌ನ ಯೋಜನಾ ಸಮನ್ವಯಾಧಿಕಾರಿ ಅನಿಲ್‌ ಧಿರ್‌ ಭಾನುವಾರ ಹೇಳಿದ್ದಾರೆ.

ದೇವಾಲಯವನ್ನು ನವೀಕರಿಸುವ ಬಗ್ಗೆ ಭಾರತೀಯ ಪುರಾತತ್ವ ಇಲಾಖೆಗೆ ಶೀಘ್ರವೇ ಪತ್ರ ಬರೆಯುವುದಾಗಿಯೂ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT