ನವೋದಯ ಶಾಲೆಗಳಲ್ಲಿ 5 ಸಾವಿರ ಸೀಟುಗಳು ಹೆಚ್ಚಳ

7

ನವೋದಯ ಶಾಲೆಗಳಲ್ಲಿ 5 ಸಾವಿರ ಸೀಟುಗಳು ಹೆಚ್ಚಳ

Published:
Updated:

ನವದೆಹಲಿ: ಪ್ರಸಕ್ತ (2019–20) ಶೈಕ್ಷಣಿಕ ವರ್ಷದಿಂದ ಜವಾಹರ್‌ ನವೋದಯ ವಿದ್ಯಾಲಯಗಳಲ್ಲಿ (ಜೆಎನ್‌ವಿ) 5000 ಸೀಟುಗಳು ಹೆಚ್ಚಳವಾಗಲಿವೆ ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್‌ ತಿಳಿಸಿದರು.

ಗ್ರಾಮೀಣ ಪ್ರತಿಭಾವಂತ ವಿದ್ಯಾರ್ಥಿಗಳಿಗಾಗಿ ಕೇಂದ್ರ ಸರ್ಕಾರದ ವತಿಯಿಂದ ನಡೆಸಲಾಗುತ್ತಿರುವ ಈ ವಸತಿ ಶಾಲೆಗಳಲ್ಲಿ ಸದ್ಯ 46,600 ಸೀಟುಗಳಿದ್ದು, ಹೊಸ ಸೀಟುಗಳು ಸೇರಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಒಟ್ಟು 51,000 ಸೀಟುಗಳು ಆಗಲಿವೆ.

‘ಇಷ್ಟು ಪ್ರಮಾಣದಲ್ಲಿ ಸೀಟುಗಳು ಹೆಚ್ಚಳವಾಗಿರುವುದು ಗ್ರಾಮೀಣ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಈ ಬಾರಿಯ ಸೀಟು ಹೆಚ್ಚಳವೂ ಸೇರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ಜವಾಹರ್‌ ನವೋದಯ ವಿದ್ಯಾಲಯಗಳಲ್ಲಿ ಒಟ್ಟು 14,000 ಸೀಟುಗಳನ್ನು ಹೆಚ್ಚಿಸಲಾಗಿದೆ. ಮುಂದಿನ ನಾಲ್ಕು ವರ್ಷಗಳಲ್ಲಿ ಇನ್ನೂ 32,000 ಸೀಟುಗಳನ್ನು ಹೆಚ್ಚಿಸುವ ಗುರಿ ಇದೆ’ ಎಂದು ವಿವರಿಸಿದರು.

‘2019ರ ಶೈಕ್ಷಣಿಕ ವರ್ಷಕ್ಕೆ ನಡೆಯುವ ಪ್ರವೇಶ ಪರೀಕ್ಷೆಗೆ ಒಟ್ಟು 31.10 ಲಕ್ಷ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಇದು  ಗ್ರಾಮೀಣ ವಿದ್ಯಾರ್ಥಿಗಳಲ್ಲಿ ಗುಣಮಟ್ಟದ ಶಿಕ್ಷಣ ಪಡೆಯಬೇಕೆನ್ನುವ ಆಕಾಂಕ್ಷೆ ವೃದ್ಧಿಯಾಗುತ್ತಿರುವುದನ್ನು ಸೂಚಿಸುತ್ತದೆ. ಈ ಆಕಾಂಕ್ಷೆಗೆ ನೆರವಾಗಲು ಸರ್ಕಾರ ನಿರಂತರವಾಗಿ ಪ್ರಯತ್ನಿಸುತ್ತಿದೆ’ ಎಂದರು.

1985ರಲ್ಲಿ ಮಾನವ ಸಂಪನ್ಮೂಲಗಳ ಸಚಿವರಾಗಿದ್ದ ಪಿ.ವಿ. ನರಸಿಂಹರಾವ್ ಅವರ ಕನಸಿನ ಕೂಸಾಗಿ ಶುರುವಾದ ಈ ವಿದ್ಯಾಲಯಗಳ ಮುಖ್ಯ ಗುರಿ ಭಾರತದ ಗ್ರಾಮೀಣ ಭಾಗದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವುದು. ಪ್ರಾರಂಭದಲ್ಲಿ ನವೋದಯ ವಿದ್ಯಾಲಯ ಎಂದಷ್ಟೇ ಇದ್ದ ಈ ಶಾಲೆಗಳು ಜವಾಹರಲಾಲ್ ನೆಹರು ಅವರ ಜನ್ಮಶತಾಬ್ದಿಯ ವರ್ಷದಲ್ಲಿ ‘ಜವಾಹರ ನವೋದಯ ವಿದ್ಯಾಲಯ’ಗಳೆಂದು ಪುನಃನಾಮಕರಣಗೊಂಡವು. 

ಬರಹ ಇಷ್ಟವಾಯಿತೆ?

 • 11

  Happy
 • 1

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !