ಪುತ್ರಿ, ಮೊಮ್ಮಗನ ಮುಂದೆಯೇ ಇರಿದು ವ್ಯಕ್ತಿಯ ಹತ್ಯೆ

7

ಪುತ್ರಿ, ಮೊಮ್ಮಗನ ಮುಂದೆಯೇ ಇರಿದು ವ್ಯಕ್ತಿಯ ಹತ್ಯೆ

Published:
Updated:

ಜೈಪುರ: ಪುತ್ರಿ ಹಾಗೂ ಮೊಮ್ಮಗನ ಮುಂದೆಯೇ 56 ವರ್ಷದ ವ್ಯಕ್ತಿಯೊಬ್ಬರನ್ನು ದರೋಡೆಕೋರರು ಇರಿದು ಹತ್ಯೆಗೈದಿರುವ ಘಟನೆ ಇಲ್ಲಿನ ಉದಯಪುರದಲ್ಲಿ ನಡೆದಿದೆ.

ಯಶ್ವಂತ್ ಶರ್ಮಾ ಮೃತಪಟ್ಟವರು. ಗುಜರಾತ್‌ನಿಂದ ಬಂದಿದ್ದ ಇವರು ಬುಧವಾರ ರಾತ್ರಿ ಉದಯಪುರ ತಲುಪಿದ್ದರು. ಅಲ್ಲಿಂದ ಹಿರಣ್ಮಾಗ್ರಿಗೆ ತೆರಳಲು ಟ್ಯಾಕ್ಸಿ ಸಿಗದ ಕಾರಣ ಪುತ್ರಿ ಹಾಗೂ ಮೊಮ್ಮಗನ ಜೊತೆ ವ್ಯಾನೊಂದಕ್ಕೆ ಹತ್ತಿದ್ದರು. ಅದರಲ್ಲಿದ್ದ ನಾಲ್ವರು ದಾರಿ ಮಧ್ಯೆ ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

‘ವ್ಯಾನ್‌ ದಾರಿ ಬದಲಿಸಿದಾಗ ಶರ್ಮಾ ಪ್ರತಿಭಟಿಸಿದ್ದಾರೆ. ಈ ವೇಳೆ ವ್ಯಾನ್‌ನಲ್ಲಿದ್ದ ಒಬ್ಬಾತ ಶರ್ಮಾ ಅವರ ತೊಡೆಗೆ ಇರಿದು ವ್ಯಾನ್‌ನಿಂದ ಹೊರಗೆ ತಳ್ಳಿದ್ದಾನೆ. ತೀವ್ರ ರಕ್ತಸ್ರಾವದಿಂದ ಅವರು ಮೃತಪಟ್ಟಿದ್ದಾರೆ’ ಎಂದು ಉದಯಪುರ ಪೊಲೀಸ್‌ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್‌ ಹೇಳಿದ್ದಾರೆ.

‘ಸ್ಪಲ್ವ ದೂರ ಸಂಚರಿಸಿದ ಬಳಿಕ ವ್ಯಾನ್‌ನಲ್ಲಿದ್ದವರು ಶರ್ಮಾ ಅವರ ಪುತ್ರಿಯ ಬಳಿಯಿದ್ದ ಮೊಬೈಲ್‌ ಕಸಿದುಕೊಂಡು ಆಕೆಯನ್ನೂ ಪುತ್ರನ ಜೊತೆ ವ್ಯಾನ್‌ನಿಂದ ಹೊರ ತಳ್ಳಿದ್ದಾರೆ. ಆದರೆ ಅವರಿಗೆ ಹಲ್ಲೆ ನಡೆಸಿಲ್ಲ’ ಎಂದೂ ತಿಳಿಸಿದ್ದಾರೆ.

ಶರ್ಮಾ ಅವರು ಉದಯಪುರದಲ್ಲಿ ಅಬಕಾರಿ ಇಲಾಖೆಯ ನೌಕರರಾಗಿದ್ದು, ಪುತ್ರಿಯ ಚಿಕಿತ್ಸೆಗಾಗಿ ಗುಜರಾತ್‌ನ ಅಹಮ್ಮದಾಬಾದ್‌ಗೆ ತೆರಳಿದ್ದರು. ಅಲ್ಲಿಂದ ಮರಳುವಾಗ ಈ ಘಟನೆ ನಡೆದಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

 

 

 

 

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !