ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಕಾರ್ಮಿಕರಿಗೆ ಕೊಲ್ಲಿ ರಾಷ್ಟ್ರಗಳ ಬಾಗಿಲು ಬಂದ್‌

Last Updated 23 ಡಿಸೆಂಬರ್ 2018, 19:25 IST
ಅಕ್ಷರ ಗಾತ್ರ

ನವದೆಹಲಿ: ಉದ್ಯೋಗ ಹುಡುಕಿಕೊಂಡು ತೆರಳುವ ಭಾರತದ ಕಾರ್ಮಿಕರಿಗೆ ಇನ್ನು ಮುಂದೆ ಕೊಲ್ಲಿ ರಾಷ್ಟ್ರಗಳ ಬಾಗಿಲು ಮುಚ್ಚಲಿದೆ.

ಕೊಲ್ಲಿ ರಾಷ್ಟ್ರಗಳಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿರುವುದರಿಂದ ವಲಸಿಗ ಕಾರ್ಮಿಕರಿಗೆ ಅವಕಾಶ ದೊರೆಯುತ್ತಿಲ್ಲ.

ಕುವೈತ್‌, ಬಹ್ರೇನ್‌, ಸೌದಿ ಅರೇಬಿಯಾ, ಸಂಯುಕ್ತ ಅರಬ್‌ ಸಂಸ್ಥಾನ, ಕತಾರ್‌ ಮತ್ತು ಒಮನ್‌ಗೆ ಉದ್ಯೋಗಕ್ಕಾಗಿ ವಲಸೆ ಹೋಗುವ ಕಾರ್ಮಿಕರ ಸಂಖ್ಯೆ ನಾಲ್ಕು ವರ್ಷಗಳಲ್ಲಿ ಗಣನೀಯವಾಗಿ ಇಳಿಕೆಯಾಗಿದೆ.

2014ರಲ್ಲಿ 7.75 ಲಕ್ಷ ಭಾರತದ ಕಾರ್ಮಿಕರು ಈ ರಾಷ್ಟ್ರಗಳಿಗೆ ವಲಸೆ ಹೋಗಿದ್ದರು. 2017ರಲ್ಲಿ ಈ ಸಂಖ್ಯೆ 3.74 ಲಕ್ಷಕ್ಕೆ ಕುಸಿದಿದೆ. ಈ ವರ್ಷ ನವೆಂಬರ್‌ 30ರವರೆಗೆ ಈ ಸಂಖ್ಯೆ 2.94 ಲಕ್ಷಕ್ಕೆ ಇಳಿದಿದೆ ಎಂದು ವಿದೇಶಾಂಗ ಸಚಿವಾಲಯ ಲೋಕಸಭೆಗೆ ತಿಳಿಸಿದೆ.

ಮಂದಗತಿಯ ಆರ್ಥಿಕ ಪ್ರಗತಿ ಮತ್ತು ಸ್ಥಳೀಯ ಕಾರ್ಮಿಕರಿಗೆ ಅವಕಾಶ ನೀಡುವ ಹೊಸ ಉದ್ಯೋಗ ನೀತಿ ಭಾರತದಿಂದ ವಲಸೆ ಹೋಗುವ ಕಾರ್ಮಿಕರ ಮೇಲೆ ಪರಿಣಾಮ ಬೀರಿದೆ ಎಂದು ವಿದೇಶಾಂಗ ಖಾತೆ ರಾಜ್ಯ ಸಚಿವ ವಿ.ಕೆ. ಸಿಂಗ್‌ ಲೋಕಸಭೆಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT