ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಲಿಸುವ ರೈಲು ಏರಿದರೆ ಕಾಣಲಿದೆ ನೀಲಿ ಬೆಳಕು !

Last Updated 14 ಜನವರಿ 2019, 18:27 IST
ಅಕ್ಷರ ಗಾತ್ರ

ನವದೆಹಲಿ:ಚಲಿಸುವ ರೈಲನ್ನು ಏರಲು ಪ್ರಯತ್ನಿಸಿ ಅಪಘಾತಕ್ಕೀಡಾಗುವ ಪ್ರಕರಣಗಳು ಹೆಚ್ಚುತ್ತಿದ್ದಂತೆ, ಇಂತಹ ಅವಘಡಗಳನ್ನು ತಡೆಯುವ ನಿಟ್ಟಿನಲ್ಲಿ ರೈಲ್ವೆ ಸಚಿವಾಲಯವು ಮುಂಬೈನಲ್ಲಿ ಹೊಸ ಪ್ರಯೋಗಕ್ಕೆ ಕೈ ಹಾಕಿದೆ.

ರೈಲು ಇನ್ನೇನು ಹೊರಡಲಿದೆ ಎನ್ನುವಾಗ ನೀಲಿ ಬೆಳಕಿನ ಸಂಜ್ಞೆ ಕಾಣಿಸಿಕೊಳ್ಳಲಿದೆ. ಈ ಸಂದರ್ಭದಲ್ಲಿ ಪ್ರಯಾಣಿಕರು ರೈಲನ್ನು ಹತ್ತಲು ಪ್ರಯತ್ನಿಸಬಾರದು ಎಂಬ ಎಚ್ಚರಿಕೆಯನ್ನು ನೀಡಲಾಗುತ್ತದೆ.

’ಪ್ಲಾಟ್‌ಫಾರಂ ಮೇಲೆ ಬಾಕ್ಸ್ ಆಕಾರದಲ್ಲಿ ಈ ಬೆಳಕು ಕಾಣಿಸಿಕೊಳ್ಳಲಿದೆ. ಪ್ರಯಾಣಿಕರಿಗೆ ಸ್ಪಷ್ಟವಾಗಿ ಕಾಣುವ ರೀತಿಯಲ್ಲಿ ಈ ಸಂಜ್ಞೆ ಇರುತ್ತದೆ. ಎದುರಿನಿಂದ ಬರುವ ರೈಲುಗಳಿಗೂ ಇದರಿಂದ ಸೂಚನೆ ಸಿಗುತ್ತದೆ. ರೈಲ್ವೆ ಗಾರ್ಡ್‌ ಹಸಿರು ನಿಶಾನೆ ತೋರಿಸುವ ಸಾಧನಕ್ಕೆ ಈ ತಂತ್ರಜ್ಞಾನದ ಸಂಪರ್ಕ ಕಲ್ಪಿಸಲಾಗಿರುತ್ತದೆ‘ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮುಂಬೈನ ಸ್ಥಳೀಯ ರೈಲುಗಳ ಸಂಚಾರದ ವೇಳೆ ಪ್ರಾಯೋಗಿಕವಾಗಿ ಈ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT