ನಿಲ್ಲದ ಪಾಕ್‌ ತಂಟೆ: ನಿರಂತರ ಶೆಲ್‌ ದಾಳಿಗೆ ತಾಯಿ–ಮಕ್ಕಳು ಸೇರಿ ಮೂರು ಬಲಿ

ಭಾನುವಾರ, ಮಾರ್ಚ್ 24, 2019
27 °C
ಕದನ ವಿರಾಮ ಉಲ್ಲಂಘನೆ

ನಿಲ್ಲದ ಪಾಕ್‌ ತಂಟೆ: ನಿರಂತರ ಶೆಲ್‌ ದಾಳಿಗೆ ತಾಯಿ–ಮಕ್ಕಳು ಸೇರಿ ಮೂರು ಬಲಿ

Published:
Updated:
Prajavani

ಜಮ್ಮು: ಪಾಕಿಸ್ತಾನದ ವಶದಲ್ಲಿದ್ದ ಭಾರತದ ವಾಯುಪಡೆ ಪೈಲಟ್‌, ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ಧಮಾನ್‌ ಬಿಡುಗಡೆ ಬಳಿಕ ಎರಡೂ ದೇಶಗಳ ನಡುವೆ ಕವಿದಿದ್ದ ಯುದ್ಧದ ಕಾರ್ಮೋಡ ತಿಳಿಯಾಗುತ್ತಿದೆ ಎನ್ನುವಾಗಲೇ ಗಡಿ ನಿಯಂತ್ರಣ ರೇಖೆಯಲ್ಲಿ ಸಂಘರ್ಷ ತೀವ್ರಗೊಂಡಿದೆ.

ರಜೌರಿ ಜಿಲ್ಲೆಯ ಗಡಿರೇಖೆಯಲ್ಲಿ ಶನಿವಾರ ಪಾಕಿಸ್ತಾನ ಸೇನೆ ಗಡಿಠಾಣೆ ಮತ್ತು ಜನವಸತಿ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಅಪ್ರಚೋದಿತ ಶೆಲ್‌ ಮತ್ತು ಗುಂಡಿನ ದಾಳಿ ನಡೆಸಿದೆ. ಆ ಮೂಲಕ ಒಂದು ವಾರದಲ್ಲಿ 60ಕ್ಕೂ ಹೆಚ್ಚು ಬಾರಿ ಕದನ ವಿರಾಮ ಉಲ್ಲಂಘಿಸಿದೆ.

ತಾಯಿ–ಮಕ್ಕಳ ಸಾವು: ನೌಶೆರಾ ವಲಯದಲ್ಲಿ ಶನಿವಾರ ಮಧ್ಯಾಹ್ನ ಪಾಕಿಸ್ತಾನ ನಡೆಸಿದ ಶೆಲ್‌ ದಾಳಿಯಲ್ಲಿ ಮಹಿಳೆ ಮತ್ತು ಆಕೆಯ ಮಕ್ಕಳಿಬ್ಬರು ಬಲಿಯಾಗಿದ್ದಾರೆ. ಇಬ್ಬರು ಭದ್ರತಾ ಸಿಬ್ಬಂದಿ ಸೇರಿದಂತೆ ಅನೇಕ ನಾಗರಿಕರು ಗಾಯಗೊಂಡಿದ್ದಾರೆ.

ನಾಗರಿಕರು ಬಂಕರ್‌ಗಳಲ್ಲಿ (ನೆಲಮಾಳಿಗೆ) ಮತ್ತು ಪುನರ್ವಸತಿ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ. ಗಡಿಯಲ್ಲಿರುವ ಶಾಲೆ, ಕಾಲೇಜುಗಳಿಗೆ ಐದನೇ ದಿನವೂ ರಜೆ ಘೋಷಿಸಲಾಗಿದೆ.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !